ಉಡುಪಿ: ಬಟ್ಟೆ ಖರೀದಿಸಲು ಹೋಗಿ ಬರುವುದಾಗಿ ಹೇಳಿ ಮನೆಯಿಂದ ಎರಡು ವರ್ಷದ ಹೆಣ್ಣು ಮಗುವಿನೊಂದಿಗೆ ಪೇಟೆಗೆ ಹೋದ ಮಹಿಳೆಯೊಬ್ಬರು ವಾಪಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.
ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮ ಎಂಜಿಎಂ ಬಳಿ ವಾಸವಾಗಿರುವ ಮುತ್ತಪ್ಪ ಹನುಮಂತ ವಡ್ಡರ್ ಎಂಬವರ ಪತ್ನಿ 22 ವರ್ಷದ ಪದ್ಮ ಹಾಗೂ ಎರಡು ವರ್ಷದ ಪ್ರಣತಿ ಎಂಬ ಮಗಳು ನಾಪತ್ತೆಯಾಗಿದ್ದಾರೆ.
ಪದ್ಮ ತನ್ನ ಮಗುವಿನೊಂದಿಗೆ ಎ.15ರಂದು ಮಧ್ಯಾಹ್ನ 2.40ಕ್ಕೆ ಬಟ್ಟೆ ಖರೀದಿಸಲು ಮನೆಯಿಂದ ಹೋಗಿದ್ದರು. ಆದರೆ ಬಳಿಕ ಮನೆಗೂ ವಾಪಾಸು ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












