ಉಡುಪಿ: ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳ್ಳತನ ಮಾಡಿರುವ ಘಟನೆ ಫೆ.5 ರಂದು ನಡೆದಿದೆ.
ಈ ಬಗ್ಗೆ ಉಡುಪಿ ಕಲ್ಯಾಣಪುರ ಮೂಡುಬೆಟ್ಟು ನಿವಾಸಿ ರಾಜು ಅಂಚನ್ ಪೊಲೀಸರಿಗೆ ದೂರು ನೀಡಿದ್ದಾರೆ. ರಾಜು ಅಂಚನ್ ಎಂದಿನಂತೆ ಫೆ.5ರಂದು ಬೆಳಿಗ್ಗೆ ನ್ಯಾಯಾಲಯದಲ್ಲಿ ಕರ್ತವ್ಯಕ್ಕೆ ಹೋಗಿದ್ದು, ತನ್ನ ಸ್ಕೂಟರ್ ನ್ನು ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿದ್ದರು. ಸಂಜೆ ಕರ್ತವ್ಯ ಮುಗಿಸಿ ಬಂದು ನೋಡುವಾಗ ನಿಲ್ಲಿಸಿದ್ದ ಜಾಗದಲ್ಲಿ ಸ್ಕೂಟರ್ ಇರಲಿಲ್ಲ. ಯಾರೋ ಕಳ್ಳರು ಸ್ಕೂಟರ್ ಕಳವು ಮಾಡಿಕೊಂಡು ಹೋಗಿದ್ದಾರೆ. ಕಳವಾದ ಸ್ಕೂಟರ್ನ ಅಂದಾಜು ಮೌಲ್ಯ 35 ಸಾವಿರ ಆಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.