ಉಡುಪಿ: ಕಸದಿಂದ ವಿಸ್ಮಯ-ತ್ಯಾಜ್ಯ ವಸ್ತುಗಳ ಸದ್ಬಳಕೆಯ ಮಾದರಿಗಳ ನಿರ್ಮಾಣ ಸ್ಪರ್ಧೆ; ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಉಡುಪಿ: ಜಿಲ್ಲೆಯಲ್ಲಿ 100ಕಿಂತಲೂ ಹೆಚ್ಚು ಗ್ರಾಮ ಪಂಚಾಯತ್ ಗಳಲ್ಲಿ ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ತ್ಯಾಜ್ಯ ನಿರ್ವಹಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಸಾರ್ವಜನಿಕರ ಸಹಕಾರ ಅತ್ಯಗತ್ಯ. ತ್ಯಾಜ್ಯ ಸಂಗ್ರಹಣೆ, ವಿಂಗಡಣೆ ಹಾಗೂ ನಿರ್ವಹಣೆ ಕುರಿತಾಗಿ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸ್ವಚ್ಚ ಭಾರತ್ ಮಿಷನ್ (ಗ್ರಾಮೀಣ) ಜಿಲ್ಲಾ ಪಂಚಾಯತ್ ಉಡುಪಿ ಇವರ ನೇತೃತ್ವಲ್ಲಿ ‘ಕಸದಿಂದ ವಿಸ್ಮಯ- ತ್ಯಾಜ್ಯ ವಸ್ತುಗಳ ಸದ್ಬಳಕೆಯ ಮಾದರಿಗಳ ನಿರ್ಮಾಣ ಸ್ಪರ್ಧೆ’ಯನ್ನು ಹಮ್ಮಿಕೊಳ್ಳಲಾಗಿದೆ.

ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತ್ಯಾಜ್ಯ ನಿರ್ವಹಣಾ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಕೈ ಚೀಲ, ಪ್ಲಾಸ್ಟಿಕ್ ಬಾಟಲ್ ಗಳು, ಪೇಪರ್, ರಟ್ಟು, ಗ್ರಾಜು, ಲೋಹ, ರಬ್ಬರ್, ಚಪ್ಪಲಿ, ಬಟ್ಟೆ, ಥರ್ಮಕೋಲ್, ಇಲೆಕ್ಟ್ರಾನಿಕ್ ವಸ್ತುಗಳು, ಟಯರ್ ಮುಂತಾದ ತ್ಯಾಜ್ಯ ವಸ್ತುಗಳು ಲಭ್ಯವಿದ್ದು, ಇವುಗಳ ಸದ್ಭಳಕೆ ಮಾದರಿ ನಿರ್ಮಾಣ ಸ್ಪರ್ಧೆಯನ್ನು ಉಡುಪಿ ಜಿಲ್ಲೆಯ ಪಿಯುಸಿಯಿಂದ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುತ್ತಿದೆ.

ನೋಂದಣಿ:
*ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವ ಆಕಾಂಕ್ಷಿಗಳು ಇದೇ ಏ. 20ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು.
*ಮಾದರಿಗಳನ್ನು ಸಲ್ಲಿಸಲು ಏ. 27 ಅಂತಿಮ ದಿನಾಂಕವಾಗಿದೆ.‌

ಸ್ಪರ್ಧೆಯ ನಿಯಮ ನಿಬಂಧನೆಗಳು:
* ಸ್ಪರ್ಧೆಯಲ್ಲಿ ಭಾಗವಹಿಸಲು ಪಿ.ಯು.ಸಿ ಯಿಂದ ಸ್ನಾತಕೋತ್ತರ (PUC to Post Graduation) ಅಧ್ಯಯನ ಮಾಡುತ್ತಿರುವ ಉಡುಪಿ ಜಿಲ್ಲೆಯ ಎಲ್ಲಾ ಆಸಕ್ತ ವಿದ್ಯಾರ್ಥಿಗಳಿಗೆ ಮುಕ್ತ ಅವಕಾಶವಿದೆ.

* ಸ್ಪರ್ಧೆಗೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.

* ನಿಗದಿತ ದಿನಾಂಕದಿಂದ ನಂತರ ಬರುವ ಮಾದರಿಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

* ಭಾಗವಹಿಸುವ ವಿದ್ಯಾರ್ಥಿಗಳು ಸಮೀಪದ ಗ್ರಾಮ ಪಂಚಾಯತ್ ನಿಂದ ನಿಗದಿತ ಫಾರಂ ಅನ್ನು ಪಡೆದು ಭರ್ತಿ ಮಾಡಿ ಮುಂಚಿತವಾಗಿ ಹೆಸರು ನೊಂದಾಯಿಸಿಕೊಳ್ಳಬೇಕು.

* ಭರ್ತಿ ಮಾಡಿದ ಅರ್ಜಿ ಫಾರಂನೊಂದಿಗೆ ಕಾಲೇಜಿನಿಂದ ವಿತರಿಸುವ ಗುರುತು ಪತ್ರದ ಪ್ರತಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು.

* ಒಬ್ಬ ವಿದ್ಯಾರ್ಥಿ ಅಥವಾ 5ಕ್ಕಿಂತ ಮೀರದಂತೆ ವಿದ್ಯಾರ್ಥಿಗಳ ಒಂದು ಗುಂಪು ರಚಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

* ಗುಂಪಾಗಿ ಭಾಗವಹಿಸುವ ವಿದ್ಯಾರ್ಥಿಗಳಲ್ಲಿ ಒಬ್ಬರು ಹೆಸರು ನೊಂದಾಯಿಸುವುದು ಹಾಗೂ ಇತರೇ ವಿದ್ಯಾರ್ಥಿಗಳ ಗುರುತು ಪತ್ರ ಲಗತ್ತಿಸಬೇಕು.

* ವಿವಿಧ ಕಾಲೇಜುಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಒಟ್ಟಾಗಿ ಒಂದು ಗುಂಪು ರಚಿಸಿ ಭಾಗವಹಿಸಲು ಅವಕಾಶವಿದೆ.

* ತಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣಾ ಕೇಂದ್ರ ಇಲ್ಲದಿದ್ದಲ್ಲಿ ಕೇಂದ್ರ ಇರುವ ಸಮೀಪದ ಇತರೇ ಗ್ರಾಮ ಪಂಚಾಯತ್ ನಲ್ಲಿ ಹೆಸರು ನೊಂದಾಯಿಸಿ ಭಾಗವಹಿಸಬಹುದು.

* ಮಾದರಿಗಳನ್ನು ಸಿದ್ದಪಡಿಸಲು ತ್ಯಾಜ್ಯ ನಿರ್ವಹಣಾ ಕೇಂದ್ರದ ತ್ಯಾಜ್ಯವನ್ನೇ ಬಳಸಬೇಕು.

* ಮಾದರಿಗಳನ್ನು ವಿದ್ಯಾರ್ಥಿಗಳೇ ಸ್ವತಃ ಸಿದ್ದಪಡಿಸಬೇಕು, ನಕಲು ಮಾದರಿಗಳನ್ನು ಸಲ್ಲಿಸುವಂತಿಲ್ಲ.

* ತ್ಯಾಜ್ಯ ಕೇಂದ್ರದಲ್ಲಿ ಶಾಶ್ವತ ಮಾದರಿಗಳನ್ನು ಸಿದ್ದಪಡಿಸಬಹುದು ಅಥವಾ ಸ್ವಂತ ಸ್ಥಳದಲ್ಲಿ ಸಿದ್ದಪಡಿಸಿ ಗ್ರಾಮ ಪಂಚಾಯತ್ ಗೆ ನೀಡಬಹುದು.

* ಒಂದು ತಂಡ ಒಂದಕ್ಕಿಂತ ಹೆಚ್ಚು ಮಾದರಿಯನ್ನು ಸಿದ್ದಪಡಿಸಬಹುದು.

* ಮಾದರಿ ಸಿದ್ದಪಡಿಸುವ ಸ್ಥಳದಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಹಾಗೂ ಉಳಿಕೆ ತ್ಯಾಜ್ಯವನ್ನು ತ್ಯಾಜ್ಯ ನಿರ್ವಹಣಾ ಕೇಂದ್ರಕ್ಕೆ ಮರಳಿ ನೀಡುವುದು.

* ಮಾದರಿಗಳು ಅಸಹ್ಯಕರ ಸನ್ನಿವೇಶಗಳನ್ನು ಅಥವಾ ರಾಜಕೀಯ, ಧಾರ್ಮಿಕವಾಗಿ ಅಥವಾ ಇನ್ನಿತರ ಯಾವುದೇ ರೀತಿಯಲ್ಲಿ ವಿವಾದ ಉಂಟುಮಾಡಬಹುದಾದ ಅಂಶಗಳನ್ನು ಒಳಗೊಂಡಿರಬಾರದು.

* ಸ್ಪರ್ಧೆಗಾಗಿ ಸಿದ್ದಪಡಿಸಿ ಸಲ್ಲಿಸುವ ಮಾದರಿಗಳನ್ನು ಹಿಂತಿರುಗಿಸಲಾಗುವುದಿಲ್ಲ, ಅವುಗಳನ್ನು ಬಳಸಿಕೊಳ್ಳುವ ಹಕ್ಕನ್ನು ಜಿಲ್ಲಾ ಪಂಚಾಯತ್ ಹೊಂದಿರುತ್ತದೆ.

* ಕಸದಿಂದ ವಿಸ್ಮಯ- ತ್ಯಾಜ್ಯ ವಸ್ತುಗಳ ಸದ್ಬಳಕೆಯ ಮಾದರಿಗಳ ನಿರ್ಮಾಣ ಸ್ಪರ್ಧೆಯು ಈ ಕೆಳಗಿನ ಬಹುಮಾನಗಳನ್ನು ಒಳಗೊಂಡಿರುತ್ತದೆ.

ಸ್ಪರ್ಧೆಯ ವಿಜೇತರ ಹೆಸರುಗಳನ್ನು ದಿನಪ್ರತಿಕೆಗಳಲ್ಲಿ ಹಾಗೂ ಗ್ರಾ.ಪಂ ನೋಟಿಸ್ ಬೋರ್ಡ್ ಗಳಲ್ಲಿ ಪ್ರಕಟಿಸಲಾಗುವುದು.

ಪ್ರಥಮ ಬಹುಮಾನ: ₹ 15,000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ.

ದ್ವಿತೀಯ ಬಹುಮಾನ: ₹10,000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ.

ತೃತೀಯಾ ಬಹುಮಾನ: ₹5,000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ.

5 ಸಮಾಧಾನಕರ ಬಹುಮಾನ: ತಲಾ ₹1,000 ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 98459 24148, 99644 43064 ಅಥವಾ ಸಮೀಪದ ಗ್ರಾಮ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಬಹುದು.

ನಿಗದಿತ ಫಾರಂ