ಉಡುಪಿ: ಶ್ರೀ ಪುತ್ತಿಗೆ ಮಠದ ಕಿರಿಯ ಶ್ರೀಗಳಿಗೆ 37ನೇ ಜನ್ಮ ನಕ್ಷತ್ರ ಸಂಭ್ರಮ: ಕೃಷ್ಣ ದೇವರಿಗೆ ಮುತ್ತಿನ ಕವಚ ಸಮರ್ಪಣೆ

ಉಡುಪಿ: ಸಾಲಂಕೃತ ಪಲ್ಲಕ್ಕಿಯಲ್ಲಿ ಮುತ್ತಿನ ಕವಚವನ್ನು ಮೆರವಣಿಗೆಯಲ್ಲಿ ವೈಭವದಿಂದ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಸುಶೀಂಧ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಶ್ರೀ ಕೃಷ್ಣಮಠಕ್ಕೆ ತರಲಾಯಿತು.

ಪುತ್ತಿಗೆ ಮಠದ ಕಿರಿಯ ಶ್ರೀಪಾದರು ಬೆಳಿಗ್ಗೆ ಶ್ರೀ ಕೃಷ್ಣನಿಗೆ ಉಷಾಕಾಲದ ಪೂಜೆಯನ್ನು ಮಾಡಿದರು. ಉತ್ಸವ ಪ್ರಿಯನಾದ ಶ್ರೀ ಕೃಷ್ಣ ದೇವರಿಗೆ ಪರ್ಯಾಯದ ಮೊದಲ ದಿನದಿಂದಲೂ ಭಕ್ತವೃಂದವು ಕಾತರದಿಂದ ನಿರೀಕ್ಷಿಸುವಂತೆ ಮಾಡಿ, ಅಲಂಕಾರಪ್ರಿಯನನ್ನು ದಿನಕ್ಕೊಂದು ವಿಶೇಷವಾಗಿ ಅಲಂಕಾರದಿಂದ ಪೂಜಿಸುತ್ತಿರುವ ಅಲಂಕಾರ ತಜ್ಞ ಎಂದು ಎಲ್ಲರಿಂದಲೂ ಕೀರ್ತಿ ಪಡೆದಿರುವ ಕಿರಿಯ ಶ್ರೀಗಳು ಅದಮಾರು ಮಠದ ಹಿರಿಯ ಶ್ರೀಗಳಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ದಿವ್ಯ ಹಸ್ತಗಳಿಂದ, ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ವಿಶೇಷವಾಗಿ ಶ್ರೀ ಕೃಷ್ಣ ದೇವರಿಗೆ ಮುತ್ತಿನ ಕವಚವನ್ನು ಸಮರ್ಪಿಸಿದರು. ಪುತ್ತಿಗೆ ಕಿರಿಯ ಶ್ರೀಪಾದರು ಅಲಂಕಾರ ಪೂಜೆಯನ್ನು ಮಾಡಿ ಆರತಿಯನ್ನು ಬೆಳಗಿದರು. ನಂತರ ಹಿರಿಯ ಶ್ರೀಪಾದರು ಅರ್ಚನೆ ಸಹಿತ ಮಹಾಪೂಜೆಯನ್ನು ನೆರವೇರಿಸಿದರು.