ಉಚ್ಚಿಲ-ದಸರಾ 2025: ಸೆ.26 ರಂದು ಮಕ್ಕಳಿಂದ ಶ್ರೀ ಶಾರದಾ ದೇವಿಯ ‘ಛದ್ಮವೇಷ ಸ್ಪರ್ಧೆ’

ಉಡುಪಿ: ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ಪ್ರಯುಕ್ತ ಮುದ್ದು ಮಕ್ಕಳಿಂದ ಶ್ರೀ ಶಾರದಾ ದೇವಿಯ ಛದ್ಮವೇಷ ಸ್ಪರ್ಧೆಯು ಸೆ.26 ರಂದು ಶುಕ್ರವಾರ 10.30ಕ್ಕೆ ಸ್ಥಳ: ಶ್ರೀಮತಿ ಶಾಲಿನಿ ಡಾ| ಜಿ. ಶಂಕರ್ ಸಭಾಂಗಣ, ಉಚ್ಚಿಲ ಇಲ್ಲಿ ನಡೆಯಲಿದೆ.

ಸ್ಪರ್ಧಾ ನಿಯಮಗಳು:

  1. ಸ್ಪರ್ಧೆಯು 3 ವರ್ಷದಿಂದ 9 ವರ್ಷಗಳ ವಯೋಮಿತಿಯಲ್ಲಿ ನಡೆಯಲಿದೆ.
  2. ಸ್ಪರ್ಧಿಗಳು ಮೇಕಪ್, ವೇಷಭೂಷಣದೊಂದಿಗೆ ತಯಾರಾಗಿ ಬರತಕ್ಕದ್ದು.
  3. ಯಾವುದೇ ರೀತಿಯ ಸಂಭಾಷಣೆಗೆ ಅವಕಾಶವಿರುವುದಿಲ್ಲ. ಧ್ವನಿಮುದ್ರಿತ (recorded) ಹಿನ್ನಲೆ ಸಂಗೀತವನ್ನು ಉಪಯೋಗಿಸಬಹುದು.
  4. ಪ್ರತೀ ಸ್ಪರ್ಧಾಳುವಿಗೆ 2 ನಿಮಿಷದ ಕಾಲಾವಕಾಶ ನೀಡಲಾಗುವುದು.
  5. ಪ್ರತೀ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳೊಂದಿಗೆ ಫಲಕ ನೀಡಲಾಗುವುದು.
  6. ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ನೆನಪಿನ ಕಾಣಿಕೆ ಹಾಗೂ ರೂ.1000 ಪ್ರೋತ್ಸಾಹಧನ ನೀಡಲಾಗುವುದು. (ವಿಜೇತರನ್ನು ಹೊರತುಪಡಿಸಿ)
  7. ವಯಸ್ಸಿನ ಧೃಡೀಕರಣಕ್ಕಾಗಿ ಸ್ಪರ್ಧಿಗಳು ಶಾಲಾ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು.
  8. ಸ್ಪರ್ಧಾಕಾಂಕ್ಷಿಗಳು 30 ನಿಮಿಷ ಮುಂಚಿತವಾಗಿ ಸ್ಪರ್ಧಾ ಸ್ಥಳದಲ್ಲಿ ಹಾಜರಿರತಕ್ಕದ್ದು.
  9. ಸಂಘಟಕರ ತೀರ್ಮಾನವೇ ಅಂತಿಮವಾಗಿರುತ್ತದೆ. ಯಾವುದೇ ಚರ್ಚೆಗೆ ಅವಕಾಶವಿರುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9663160938, 9731521979