ಉಡುಪಿ: ಮಹಾಲಕ್ಷ್ಮೀ ಕೋ ಓಪರೇಟಿವ್ ಬ್ಯಾಂಕ್ ಲಿ., ಉಡುಪಿ ಇದರ ಆಶ್ರಯದಲ್ಲಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಸಹಯೋಗದೊಂದಿಗೆ ಉಚ್ಚಿಲ ದಸರಾ ಮಹೋತ್ಸವದ ಅಂಗವಾಗಿ ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ “ಚಿತ್ರ ಬಿಡಿಸುವ ಸ್ಪರ್ಧೆ” ಸೆ.27 ರಂದು ಬೆಳಗ್ಗೆ 9:30ಕ್ಕೆ ಮೊಗವೀರ ಭವನ ಉಚ್ಚಿಲದಲ್ಲಿ ನಡೆಯಲಿದೆ.
ವಿಷಯ: ನಾಡಹಬ್ಬ ದಸರಾ
ವಿಭಾಗ:
- ಕಿರಿಯರ ವಿಭಾಗ
1-4 ನೇ ತರಗತಿ - ಪ್ರಾಥಮಿಕ ವಿಭಾಗ
5-7 ನೇ ತರಗತಿ - ಹೈಸ್ಕೂಲ್ ವಿಭಾಗ
8-10 ನೇ ತರಗತಿ - ಕಾಲೇಜು ವಿಭಾಗ
ಪದವಿ ಪೂರ್ವ – ಪದವಿ ತರಗತಿ - ಸಾರ್ವಜನಿಕ ವಿಭಾಗ
ಮುಕ್ತ ಅವಕಾಶವಿದೆ.
ಸ್ಪರ್ಧಾ ನಿಯಮಗಳು:
- ಸ್ಪರ್ಧಾಳುಗಳಿಗೆ ಡ್ರಾಯಿಂಗ್ ಹಾಳೆಯನ್ನು ಸ್ಥಳದಲ್ಲಿಯೇ ನೀಡಲಾಗುವುದು.
- ಉಳಿದ ಪರಿಕರಗಳನ್ನು ಸ್ಪರ್ಧಾಳುಗಳೇ ತರತಕ್ಕದ್ದು.
- ಕಲಾಕೃತಿಗಳನ್ನು ಪೆನ್ಸಿಲ್ ಶೇಡಿಂಗ್, ಚಾರ್ಕೋಲ್, ಆಯಿಲ್ ಪೇಸ್ಟಲ್ಸ್ ಅಕ್ರಿಲಿಕ್ ಕಲರ್ಸ್, ಪೋಸ್ಟರ್ ಕಲರ್ಸ್ಟಳಿಂದ ರಚಿಸಬಹುದು.
- ತೈಲವರ್ಣಕ್ಕೆ ಅವಕಾಶವಿರುವುದಿಲ್ಲ.
- ಸ್ಪರ್ಧಾಳುಗಳು ಬೆಳಿಗ್ಗೆ 9.00ಕ್ಕೆ ಸಭಾಂಗಣದಲ್ಲಿ ಶಾಲಾ ದೃಢೀಕರಣ ಪತ್ರ ಅಥವಾ ID Card ದೊಂದಿಗೆ ಹಾಜರಿರತಕ್ಕದ್ದು.
- ಸ್ಪರ್ಧೆಗೆ 02 ಗಂಟೆಗಳ ಕಾಲಾವಕಾಶ ಮಾತ್ರ.
- ತೀರ್ಪುಗಾರರ ತೀರ್ಮಾನವೇ ಅಂತಿಮ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
www.mahalakshmicoopbank.com
Mobile: 9845016830, 9972120332












