ದುಬೈ: ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಆಗಿರುವ ಯುಎಇ ಅಥ್ಲೆಟಿಕ್ಸ್ ವಿಮೆನ್ಸ್ ಗಾಲಾ ಕೂಟದಲ್ಲಿ ಕರ್ನಾಟಕದ ಕರಿಶ್ಮಾ ಸನಿಲ್ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಭಾನುವಾರ ನಡೆದ ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಕರಿಶ್ಮಾ 53.33 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಾಂಪಿಯನ್ ಎನಿಸಿಕೊಂಡರು. ಉಳಿದಂತೆ ಲಾಂಗ್ ಜಂಪ್‌ನಲ್ಲಿ ಭಾರತದ ಆ್ಯನ್ಸಿ ಸೋಜನ್ (6.54 ಮೀ.) ಚಿನ್ನ ಗೆದ್ದರೆ, ಶೈಲಿ ಸಿಂಗ್ (6.48 ಮೀ.) ಬೆಳ್ಳಿ ಪಡೆದರು.












