ಗೆಲುವಿನ ಖಾತೆ ತೆರೆಯುವ ಉತ್ಸಾಹದಲ್ಲಿ ಉಭಯ ತಂಡಗಳು : ಆಸ್ಟ್ರೇಲಿಯಾ – ಶ್ರೀಲಂಕಾ ಮುಖಾಮುಖಿ

ಲಕ್ನೋ (ಉತ್ತರ ಪ್ರದೇಶ): ಲಕ್ನೋದಏಕಾನಾ ಕ್ರಿಕೆಟ್ ಮೈದಾನದಲ್ಲಿಂದು ಆಸ್ಟ್ರೇಲಿಯಾ – ಶ್ರೀಲಂಕಾ ತಂಡಗಳ ನಡುವೆ ಸೆಣಸಾಟ ನಡೆಯುತ್ತಿದ್ದು, ಟಾಸ್​ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್​ ಮಾಡುತ್ತಿದೆ.ಆಸ್ಟ್ರೇಲಿಯಾಗೆ ಫೀಲ್ಡಿಂಗ್​ಗೆ ಇಳಿದಿದೆ. ಉಭಯ ತಂಡಗಳು ತಮ್ಮ ಆರಂಭಿಕ ಎರಡೂ ಪಂದ್ಯಗಳನ್ನು ಸೋತಿವೆ. ಹಾಗಾಗಿ ಎರಡರಲ್ಲಿ ಒಂದು ತಂಡ ಇಂದಿನ ಪಂದ್ಯವನ್ನು ವಶಕ್ಕೆ ತೆಗೆದುಕೊಳ್ಳುವ ಮೂಲಕ ಗೆಲುವಿನ ಖಾತೆ ತೆರೆಯಲಿದೆ.ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂದು ಆಸ್ಟ್ರೇಲಿಯಾ – ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿವೆ.

ಟಾಸ್​ ಬಳಿಕ ಲಂಕಾ ನಾಯಕ ಹೇಳಿದ್ದಿಷ್ಟು: ನಾವು ಮೊದಲು ಬ್ಯಾಟ್ ಮಾಡುಲು ನಿರ್ಧರಿಸಿದ್ದೇವೆ. ವಿಕೆಟ್​ ಕಾಯ್ದುಕೊಳ್ಳುವ ವಿಶ್ವಾಸವಿದೆ. ತಂಡದಲ್ಲಿ ಎರಡು ಬದಲಾವಣೆ ಮಾಡಿಕೊಳ್ಳಲಾಗಿದೆ. ದಸುನ್ ಶನಕ ಮತ್ತು ಮಹೇಶ್ ತೀಕ್ಷಣ ಆಡುತ್ತಿಲ್ಲ. ಅವರ ಸ್ಥಾನವನ್ನು ಚಮಿಕ ಕರುಣರತ್ನೆ ಮತ್ತು ಲಹಿರು ಕುಮಾರ ತುಂಬುತ್ತಿದ್ದಾರೆ. ದಾಸುನ್ ಇಂದು ತಂಡದಲ್ಲಿ ಕಾಣದಿರುವುದು ದುರದೃಷ್ಟ. 280-300 ಸ್ಕೋರ್ ಮಾಡುವ ನಿರೀಕ್ಷೆ ಇದೆ. – ಕುಸಾಲ್ ಮೆಂಡಿಸ್, ಶ್ರೀಲಂಕಾ ತಂಡದ ನಾಯಕ.

ಗೆಲ್ಲುವ ವಿಶ್ವಾಸ ಇದೆ: ಕಳೆದ ಎರಡು ದಿನಗಳ ಕಾಲ ತಂಡ ಉತ್ತಮ ಅಭ್ಯಾಸ ನಡೆಸಿದೆ. ಆದ ತಪ್ಪುಗಳು ಪುನಃ ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ. ಇಂದಿನ ಪಂದ್ಯವನ್ನು ವಶಕ್ಕೆ ತೆಗೆದುಕೊಳ್ಳುವ ಉತ್ಸಾಹ ತಂಡಕ್ಕಿದೆ. – ಪ್ಯಾಟ್ ಕಮ್ಮಿನ್ಸ್, ಆಸ್ಟ್ರೇಲಿಯಾ ತಂಡದ ನಾಯಕ.

ಆಸ್ಟ್ರೇಲಿಯಾ (ಪ್ಲೇಯಿಂಗ್ XI): ಮಿಚೆಲ್ ಮಾರ್ಷ್, ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಜೋಶ್ ಇಂಗ್ಲಿಸ್ (ವಿಕೆಟ್​ ಕೀಪರ್​), ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ (ನಾಯಕ), ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್

ಶ್ರೀಲಂಕಾ (ಆಡುವ XI): ಪಾತುಮ್ ನಿಸ್ಸಾಂಕ, ಕುಸಾಲ್ ಪೆರೇರಾ, ಕುಸಲ್ ಮೆಂಡಿಸ್ (ನಾಯಕ/ವಿಕೆಟ್​ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಚಮಿಕ ಕರುಣಾರತ್ನೆ, ದುನಿತ್ ವೆಲ್ಲಲಾಗೆ, ಮಹೇಶ್ ತೀಕ್ಷಣ, ಲಹಿರು ಕುಮಾರ, ದಿಲ್ಶನ್ ಮಧುಶಂಕ ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಬಲಿಷ್ಠ ಆಸ್ಟ್ರೇಲಿಯಾ ತಂಡ ತನ್ನ ಎರುಡು ಪಂದ್ಯಗಳನ್ನು ಸೋತರೆ, ಶ್ರೀಲಂಕಾ ತಂಡವು ದಕ್ಷಿಣ ಅಫ್ರಿಕಾ ಮತ್ತು ಪಾಕಿಸ್ತಾನದ ವಿರುದ್ಧ ಶರಣಾಗುವ ಮೂಲಕ ಅಂಕ ಪಟ್ಟಿಯಲ್ಲಿ ಹಿಂದಿದೆ. ಆಸ್ಟ್ರೇಲಿಯಾದ ಕಳಪೆ ಪ್ರದರ್ಶನ ತಂಡಕ್ಕೆ ಮುಳುವಾದರೆ, ಶ್ರೀಲಂಕಾ ಕಳೆದ ಪಂದ್ಯದಲ್ಲಿ 345 ರನ್ ಗಳಿಸಿಯೂ ಸೋತಿದೆ.

ಹವಾಮಾನ ವರದಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ 14ನೇ ಪಂದ್ಯ ಇದಗಿದ್ದು ಈ ಪಂದ್ಯಕ್ಕೆ ಮಳೆ ಆಗುವ ಸಾಧ್ಯತೆ ತೀರಾ ಕಡಿಮೆ. ಆಟದ ಸಮಯದಲ್ಲಿ ತಾಪಮಾನವು ಸರಿ ಸುಮಾರು 34 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಮೋಡ ಕವಿದ ವಾತಾವರಣ ಕೂಡ ಕೂಡ ಇಲ್ಲ. ಕ್ರೀಡಾಭಿಮಾನಿಗಳು ಇಂದಿನ ಪಂದ್ಯವನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.