ಸಿ.ಎ. ಫೌಂಡೇಶನ್ ಅರ್ಹತಾ ಪರೀಕ್ಷೆ: ವಿದ್ಯಾಲಕ್ಷ್ಮಿ ಕಾಲೇಜಿನ ವಿದ್ಯಾರ್ಥಿನಿಯರು ಪ್ರಥಮ ಪ್ರಯತ್ನದಲ್ಲಿ ತೇರ್ಗಡೆ

ಬ್ರಹ್ಮಾವರ:ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆ ನಡೆಸುವ ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಬ್ರಹ್ಮಾವರದ ವಿದ್ಯಾ ಲಕ್ಷ್ಮಿ ಸಮೂಹ ಶಿಕ್ಷಣ ಸಂಸ್ಥೆ ಕಾಲೇಜಿನ ವಿದ್ಯಾರ್ಥಿಗಳಾದ ಜಿವೆಲ್ ಪ್ರಾರ್ಥನಾ ಮತ್ತು ಪ್ರಿಯಾ ಕಾರ್ವಿ ಇವರು ಪ್ರಥಮ ಪ್ರಯತ್ನದಲ್ಲಿ ತೇರ್ಗಡೆ ಹೊಂದಿದ್ದಾರೆ.

ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿಗಳಾದ ಜಿವೆಲ್ ಪ್ರಾರ್ಥನಾ ಮತ್ತು ಪ್ರಿಯಾ ಕಾರ್ವಿ ಇವರಿಗೆ ವಿದ್ಯಾಲಕ್ಷ್ಮಿ ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸುಬ್ರಮಣ್ಯ, ನಿರ್ದೇಶಕಿ ಶ್ರೀಮತಿ ಮಮತಾ, ಪ್ರಾಂಶುಪಾಲೆ ಡಾ. ಸೀಮಾ ಜಿ ಭಟ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಗುರುಪ್ರಸಾದ್ ಕೆ.ಜೆ, ಸಿ.ಎ. ಫೌಂಡೇಶನ್ ಸಂಯೋಜಕ ವಿಘ್ನೇಶ್ ಭಟ್ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ವೃಂದದವರು ಶುಭ ಹಾರೈಸಿದ್ದಾರೆ.