ವಿರೂಪಾಕ್ಷ ದೇವರಮನೆ ವಿರಚಿತ ಕೃತಿಗಳ ಲೋಕಾರ್ಪಣೆ

ಉಡುಪಿ: ವಿರೂಪಾಕ್ಷ ದೇವರಮನೆ ಅವರ ‘ಡಿಡ್ ಯು ಟಾಕ್ ಟು ಯುವ‌ರ್ ಚೈಲ್ಡ್ ಟುಡೇ’ ಹಾಗೂ ‘ಕಣ್ಣಿಗೆ ಕಾಣುವ ದೇವರು’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವು ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆಯಿತು. ಹಿರಿಯ ತೆಲುಗು ಸಾಹಿತಿ ಯಂಡಮೂರಿ ವೀರೇಂದ್ರನಾಥ್ ‘ಡಿಡ್ ಯು ಟಾಕ್ ಟು ಯುವರ್ ಚೈಲ್ಡ್ ಟುಡೇ’ ಹಾಗೂ ಮಾಸ್ಟರ್ ಅಫಾನ್ ಕುಟ್ಟಿ ‘ಕಣ್ಣಿಗೆ ಕಾಣುವ ದೇವರು’ ಪುಸ್ತಕವನ್ನು ಬಿಡುಗಡೆಗೊಳಿಸಿದರು.

ಯಂಡಮೂರಿ ವೀರೇಂದ್ರನಾಥ್ ಅವರು ‘ಪೋಷಕರು ಆರು ಬಗೆ; ನೀವ್ಯಾರು?’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ರೂಬಿಕ್ ಕ್ಯೂಬ್ ನಲ್ಲಿ ಗಿನ್ನೆಸ್ ದಾಖಲೆ ಮಾಡಿರುವ ಮಾಸ್ಟರ್ ಅಫಾನ್ ಕುಟ್ಟಿ ಅಂತರ್ಜಾಲ ವ್ಯಸನದಿಂದ ರೂಬಿಕ್ಸ್ ಕ್ಯೂಬ್ ಇಂದ್ರಜಾಲದತ್ತ ಎಂಬ ಕುರಿತು ಉಪನ್ಯಾಸ ನೀಡಿದರು.

ಮನೋವೈದ್ಯ ಡಾ.ಪಿ.ವಿ ಭಂಡಾರಿ, ಸಾವಣ್ಣ ಪ್ರಕಾಶನದ ಜಮೀಲ್, ಅಮಿತಾ ಪೈ ಉಪಸ್ಥಿತರಿದ್ದರು.