ಒಂದು ಕಾಲದಲ್ಲಿ ಡಾನ್ಸಿಂಗ್ ಸ್ಟಾರ್ ಎಂದು ಗುರುತಿಸಿಕೊಂಡಿದ್ದ, ಈಗ ಬಹುತೇಕ ತೆರೆ ಮರೆಗೆ ಸರಿದಿರುವ ನಟ ವಿನೋದ್ ರಾಜ್ ಪರ ನಟ ಜಗ್ಗೇಶ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನಟ ವಿನೋದ್ ರಾಜ್ ಬಗ್ಗೆ ಕಳಕಳಿ ವ್ಯಕ್ತಪಡಿಸುವ ಮೂಲಕ ಸಮಾಜಕ್ಕೆ ಸಂದೇಶವೊಂದನ್ನು ರವಾನಿಸಿದ್ದಾರೆ.
ಇಂದಿನ ಡ್ಯಾನ್ಸ್ ಸ್ಟಾರ್ಗಳು ಹುಟ್ಟವ ಮೊದಲೇ 1987ರಲ್ಲೇ ಕನ್ನಡಿಗರಲ್ಲಿ ಹುಚ್ಚೆಬ್ಬಿಸಿದ್ದ ಪ್ರತಿಭಾವಂತ ನಟ ವಿನೋದ್ ರಾಜ್. ನಾಟ್ಯದ ವ್ಯಾಕರಣ ಅರಿಯದವರನ್ನು ರಿಯಾಲಿಟಿಗೆ ಶೋ ತೀರ್ಪುಗಾರರನ್ನಾಗಿ ಮಾಡುವ ಬದಲು ವಿನೋದ್ ಅವರ ಪ್ರತಿಭೆಯನ್ನು ಬಳಸಿಕೊಳ್ಳಿ, ನಿಮ್ಮ ಶೋಗಳ ಘನತೆ ಇನ್ನು ಹೆಚ್ಚಾಗುತ್ತದೆ. ನನ್ನ ನೇರ ವೈಯಕ್ತಿಕ ಅಭಿಪ್ರಾಯ ಸತ್ಯ ಅನ್ನಿಸಿದರೆ ಒಪ್ಪಿ. ಆಗದಿದ್ದರೆ ನಕ್ಕು ಮರೆತುಬಿಡಿ ಎಂದು ಹೇಳಿದ್ದಾರೆ. ಈ ಮೂಲಕ ಜನರ ನೆನಪಿನಿಂದ ಕಳೆದು ಹೋಗಿರುವ ವಿನೋದ್ ರಾಜ್ ಅವರನ್ನು ಜನರ ಮನಸ್ಸಲ್ಲಿ ಮತ್ತೆ ನೆನಪಿಗೆ ತಂದಿದ್ದಾರೆ.