ನವದೆಹಲಿ: ಕೇಂದ್ರ ಸರ್ಕಾರವು ಫೇಮ್–2 ಯೋಜನೆಯಡಿ ಇ–ಸ್ಕೂಟರ್ಗಳ ಮೇಲಿನ ಸಬ್ಸಿಡಿಯಲ್ಲಿ ಹೆಚ್ಚಳ ಮಾಡಿದೆ. ಅದರಂತೆ ಟಿವಿಎಸ್ ಮೋಟರ್ ಕಂಪನಿಯು ತನ್ನ ವಿದ್ಯುತ್ ಚಾಲಿತ ಸ್ಕೂಟರ್ ಐಕ್ಯೂಬ್ ಬೆಲೆಯನ್ನು ₹ 11,250ರಷ್ಟು ಕಡಿತ ಮಾಡಿದೆ.
ದೆಹಲಿಯಲ್ಲಿ ಈ ಸ್ಕೂಟರ್ ಬೆಲೆ ಮೊದಲು ₹ 1,12,027 ಇತ್ತು. ಈಗ ₹ 1,00,777ಕ್ಕೆ ಇಳಿಕೆ ಆಗಿದೆ.