ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಮಹಿಳಾ ಸಮಾವೇಶ ನಡೆಯಿತು.
ಅಧ್ಯಕ್ಷತೆ ವಹಿಸಿದ ಶೋಭಾ ಉಪಾಧ್ಯಾಯರು, ನಮ್ಮ ಸಮಾಜ ಉತ್ತಮವಾಗಿ ನಡೆಯಲು ಮಹಿಳೆಯರ ಪಾಲು ದೊಡ್ಡದು. ತಾಯಿಯೇ ಮೊದಲ ಪಾಠ ಶಾಲೆ ಎಂಬಂತೆ ಚಿಕ್ಕ ಮಕ್ಕಳು ತಾಯಿಯ ಮಾತನ್ನು ಕೇಳಿ ಅದನ್ನು ಅಳವಡಿಸಿಕೊಳ್ಳುತ್ತವೆ.ಸಣ್ಣ ಮಕ್ಕಳಲ್ಲಿಯೇ ಉತ್ತಮ ಸಂಸ್ಕಾರ ಬೆಳೆಸಿದರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಇಂತಹ ಸಮಾವೇಶದಿಂದ ನಮ್ಮ ಸಮಾಜಕ್ಕೆ ಹಲವಾರು ಪ್ರಯೋಜನ ಸಿಗುವುದರಿಂದ ಮುಂದೆಯೂ ಸಮ್ಮೇಳನಗಳು ನಡೆಯಲಿ ಎಂದರು.
ಸುಳ್ಯದ ಮಮತಾ ಮೂಡಿತ್ತಾಯ ಮಾತನಾಡಿ, ಮಾತೃ ದೇವೋ ಭವ ಎಂದು ಮೊದಲ ಉನ್ನತ ಸ್ಥಾನ ಮಹಿಳೆಯರಿಗೆ ಸಿಕ್ಕಿದೆ. ಸ್ತ್ರೀಯರು ಪುರುಷರ ವೇಷಭೂಷಣ ಧರಿಸಿದ ಕೂಡಲೇ ಸ್ತ್ರೀ ಸಮಾನತೆ ಬರುವುದಿಲ್ಲ, ಹಿಂದಿನ ಹಿರಿಯ ಮಹಿಳೆಯರು ಅವಿಭಕ್ತ ಕುಟುಂಬದಲ್ಲಿದ್ದು ಆರ್ಥಿಕವಾಗಿ ಕಷ್ಟದಿಂದಿದ್ದರೂ ಮನಃಶಾಂತಿಯನ್ನು ಪಡೆಯುತ್ತಿದ್ದರು. ಅವರ ಜೀವನ ಪದ್ಧತಿಯನ್ನು ನೋಡಿ ನಾವು ಕಲಿಯಬೇಕಾದುದು ಬಹಳಷ್ಟಿದೆ ಅಂಥವರ ಅನುಭವವನ್ನು ಪದೆಡೆಯಬೇಕು ಎಂದರು.ಉಡುಪಿಯ ಶಾಂತ ಉಪಾಧ್ಯಾಯ,ಕಾಸರಗೋಡಿನ ಪ್ರೇಮ ಬರಿತ್ತಾಯ,ಕೇರಳ ಕೊಲ್ಲಮಿನ ಭಿನ್ದು ಶ್ರೀನಾಥ್ ತಮ್ಮ ತಮ್ಮ ಅಭಿಪ್ರಾಯವನ್ನು ಮಂಡಿಸಿದರು.
ಪ್ರೇಮಲತಾ ಸ್ವಾಗತಿಸಿ,ಪೂರ್ಣಿಮಾ ಜನಾರ್ಧನ್ ಕಾರ್ಯಕ್ರಮ ನಿರೂಪಿಸಿ ಪ್ರಿಯಂವದಾ ಐತಾಳ್ ಧನ್ಯವಾದ ನೀಡಿದರು.