ಉಡುಪಿ: ತುಳು ವಿದ್ವಾಂಸ, ಭಾಷಾ ಸಂಶೋಧಕ ಡಾ. ಯು.ಪಿ. ಉಪಾಧ್ಯಾಯ ಇನ್ನಿಲ್ಲ

ಉಡುಪಿ: ತುಳು ವಿದ್ವಾಂಸ, ಭಾಷಾ ಸಂಶೋಧಕ ಡಾ. ಯು.ಪಿ. ಉಪಾಧ್ಯಾಯ (86) ಅವರು ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.
ಉಪಾಧ್ಯಾಯರು ಭಾಷೆ, ಜಾನಪದ, ಸಂಸ್ಕೃತಿ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಅವರು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ತುಳು ನಿಘಂಟು ಯೋಜನೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿದ್ದಾರೆ. ಹಾಗೆಯೇ ಈ ಯೋಜನೆಯಲ್ಲಿ ಆರು ಸಂಪುಟಗಳ ತುಳು ನಿಘಂಟು ಹೊರತಂದಿದ್ದಾರೆ.
ಅವರು ಪತ್ನಿ ದಿ. ಡಾ. ಸುಶೀಲಾ ಪಿ. ಉಪಾಧ್ಯಾಯ ಅವರೊಂದಿಗೆ ಸೇರಿ ಭಾಷೆ, ಜಾನಪದ ಸಂಸ್ಕೃತಿಯ ಕುರಿತು ಬಹಳಷ್ಟು ಸಂಶೋಧನೆ ನಡೆಸಿದ್ದಾರೆ.