ತುಳು ಭಾಷೆ ಸಂಶೋಧಕ ಪ್ರೊ|ಪೀಟರ್‌ ಜೆ.ಕ್ಲಾಸ್‌ ನಿಧನ

ಮಂಗಳೂರು: ತುಳು ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಸಂಶೋಧನೆ ನಡೆಸಿದ್ದ ಪ್ರೊ|ಪೀಟರ್‌ ಜೆ.ಕ್ಲಾಸ್‌ ಭಾನುವಾರ ಅಮೆರಿಕದಲ್ಲಿ ನಿಧನರಾದರು.

ಅಮೆರಿಕದ ಕ್ಯಾಲಿಫೋರ್ನಿಯಾ ಸ್ಟೇಟ್‌ ವಿಶ್ವವಿದ್ಯಾಲಯದ ಮಾನವ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ| ಕ್ಲಾಸ್‌ ಅವರು ಕರ್ನಾಟಕದ ಕರಾವಳಿಯಲ್ಲಿ 30 ವರ್ಷಗಳ ಕಾಲ ಜನರೊಂದಿಗೆ ಬೆರೆತು ತುಳು ಭಾಷೆಯನ್ನು ಕಲಿತು, ಇಲ್ಲಿನ ಪಾಡ್ದನಗಳ ಬಗ್ಗೆ ಅನೇಕ ಲೇಖನ ಹಾಗೂ ಪುಸ್ತಕಗಳನ್ನು ಪ್ರಕಟಿಸಿ ತುಳುಭಾಷೆ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದರು.