ಒಂದು ತುಳಸಿ ಎಲೆಯಿಂದ ಏನೇನ್ ಲಾಭವಿದೆ ಅಂತ ಗೊತ್ತಾದ್ರೆ ಅಚ್ಚರಿಪಡ್ತೀರಿ : ಡಾಕ್ಟರ್ ಹೇಳಿದ್ದಾರೆ ತುಳಸಿಯ ಗುಟ್ಟು

ಆಯುರ್ವೇದದಲ್ಲಿ ತುಳಸಿಯನ್ನು ಪವಿತ್ರ ಹಾಗೂ ಗಿಡಮೂಲಿಕೆಗಳ ರಾಣಿ ಎಂದು ಹೇಳಲಾಗಿದೆ. ಒಂದು ತುಳಸಿ ಎಲೆಯಿಂದ ನೂರೆಂಟು ಪ್ರಯೋಜನಗಳಿವೆ. ತುಳಸಿ ಎಲೆಯಿಂದಾಗುವ ಲಾಭಗಳೇನು? ಎನ್ನುವುದನ್ನು ಕಾರ್ಕಳದ ವೈದ್ಯೆ ಡಾ.ಹರ್ಷಾ ಕಾಮತ್ ಇಲ್ಲಿ ತಿಳಿಸಿದ್ದಾರೆ. ತುಳಸಿಯ ಲಾಭ ತಿಳಿದುಕೊಳ್ಳಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ

ತುಳಸಿಯಲ್ಲಿ ಬಹಳ ಪ್ರಕಾರಗಳಿದ್ದು ಇದರಲ್ಲಿ ಹಸಿರು ಬಣ್ಣದ ತುಳಸಿಯನ್ನು ರಾಮ ತುಳಸಿ ಎಂದು ಹಾಗೂ ಹಸಿರು ಕರಿ ಮಿಶ್ರ ವಿರುವ ತುಳಸಿಯನ್ನುಕೃಷ್ಣ ತುಳಸಿ ಎಂದು ಕರೆಯುತ್ತಾರೆ. ತುಳಸಿಯ ಪ್ರತಿ ಭಾಗದಲ್ಲಿ ಔಷಧೀಯ ಗುಣವಿದ್ದು ಅನೇಕ ರೋಗಗಳಿಗೆ ಉಪಯೋಗಿಸುತ್ತಾರೆ.

ಇದರ ಪರಿಮಳದಿಂದ ನೊಣ, ಸೊಳ್ಳೆ, ಕ್ರಿಮಿ ಕೀಟಗಳು ದೂರ ಸರಿಯುತ್ತದೆ .ವಾಯು ಮಾಲಿನ್ಯವನ್ನು ಕಡಿಮೆಗೊಳಿಸುತ್ತದೆ. ಆದುದರಿಂದ ತುಳಸಿ ಗಿಡವನ್ನು ಮನೆಯ ಸುತ್ತಮುತ್ತಲು  ನೆಡುವುದು ಉತ್ತಮ. ತುಳಸಿಯು ಕಹಿ ಹಾಗೂ ಕಟ್ಟು ರುಚಿ ಹೊಂದಿದ್ದು ಲಘು ಶುಷ್ಕ ತೀಕ್ಷ್ಣ ಗುಣಗಳನ್ನು ಹೊಂದಿದೆ. ವಾತ ಹಾಗೂ ಕಫ ದೋಷವನ್ನು ಕಡಿಮೆಗೊಳಿಸುತ್ತದೆ. ಪಿತ್ತ ದೋಷವನ್ನು ಉಲ್ಬಣಗೊಳಿಸುತ್ತದೆ.

 ತುಳಸಿಯ ಲಾಭಗಳೇನು ಗೊತ್ತಾ?

  • ತುಳಸಿಯು ಆ್ಯಂಟಿ ವೈರಲ್, ಆ್ಯಂಟಿ ಬ್ಯಾಕ್ಟೀರಿಯಲ್  ಕೊಲೆಸ್ಟ್ರಾಲ್ ,ಬಿಪಿ ಹಾಗೂ ಗ್ಲೂಕೋಸ್ ಲೆವೆಲ್ ಅನ್ನು ಕಡಿಮೆಗೊಳಿಸುತ್ತದೆ. ಪ್ರತೀ ನಿತ್ಯ ನಾಲ್ಕು ತುಳಸಿಯ ಎಲೆಗಳನ್ನು ಜಗಿಯುವುದು ಆರೋಗ್ಯಕ್ಕೆ ಹಿತ .

  • ವಾತ ಹಾಗೂ ಕಫ ದೋಷವನ್ನು ಕಡಿಮೆ ಗೊಳಿಸುವುದರಿಂದ ಅಸ್ತಮಾ, ಶೀತ’ ಕೆಮ್ಮು ,ಉಸಿರಾಟದ ಕಾಯಿಲೆಗಳಲ್ಲಿ ತುಳಸಿಯ ಉಪಯೋಗ ಬಹಳ . ಇದಕ್ಕೆ ಮನೆಯಲ್ಲಿ ತುಳಸಿ ಟೀ ಮಾಡಿ ಕುಡಿಯಬಹುದು.

  • 10 ತುಳಸಿಯ ಎಲೆಗಳನ್ನು ಸರಿಯಾಗಿ ತೊಳೆದು ಒಂದು ಕಪ್ ನೀರಿಗೆ ಹಾಕಿ, ಅದು ಅರ್ಧ ಪ್ರಮಾಣಕ್ಕೆ ಬರುವಷ್ಟು ಕುದಿಸಿರಿ, ಬಳಿಕ ಸೋಸಿ ಸೇವಿಸಿರಿ. ಇದಕ್ಕೆ ಶುಂಠಿ ಹಾಗೂ ಲವಂಗ ಕೂಡ ಸೇರಿಸಬಹುದು. ಆದರೆ ಈ ತುಳಸಿ ಟೀಗೆ ಹಾಲನ್ನು ಬೆರೆಸಬಾರದು. ಏಕೆಂದರೆ ಅದು ಆಹಾರ ವಿರುದ್ಧವಾಗುತ್ತದೆ .

ತುಳಸಿಯನ್ನು ತ್ವಚೆಯ ರೋಗಗಳಲ್ಲಿ ಉಪಯೋಗಿಸುತ್ತಾರೆ. ತುಳಸಿ ಎಲೆಯ ಪೇಸ್ಟ್ ಮಾಡಿ ಹಚ್ಚಿದರೆ ಪಿಂಪಲ್ಸ್ ಹಾಗೂ  ತುರಿಕೆಯನ್ನು ಉಪಶಮನ ಮಾಡುತ್ತದೆ. ತುಳಸಿಯ ಪೇಸ್ಟ್ ಜೊತೆ ಹಳದಿಯನ್ನು ಕೂಡಾ ಬೆರೆಸಬಹುದು .

.ತುಳಸಿಯು ಕೇಶಕ್ಕೂ ಕೂಡ ಒಳ್ಳೆಯದು. ಡ್ಯಾಂಡ್ರಫ್ ಹಾಗೂ ತುರಿಕೆ ಇದ್ದಲ್ಲಿ ತುಳಸಿ ಎಲೆಯ ಪೇಸ್ಟ್  ಮಾಡಿ ತಲೆಗೆ ಹಚ್ಚಿ ಅರ್ಧಗಂಟೆ ನಂತರ ತೊಳೆದರೆ ಒಳ್ಳೆಯ ಪರಿಣಾಮ ಬೀರುವುದು .

ಸೈನಸೈಟಿಸ್ ಹಾಗೂ ತಲೆ ನೋವು ಇದ್ದಲ್ಲಿ ತುಳಸಿ ಎಲೆಯ ರಸವನ್ನು ಪ್ರತಿ ಮೂಗಿನ ಹೊಳ್ಳೆಗೆ ಎರಡು ಡ್ರಾಪ್ಸ್ ಹಾಕಬೇಕು. ಆದರೆ ಶುಗರ್ ಲೆವೆಲ್ ಕಡಿಮೆ ಇರುವವರು ಗರ್ಭಿಣಿ ಹೆಂಗಸರು ಹಾಗೂ ಹಾಲುಣಿಸುವ ತಾಯಂದಿರು ತುಳಸಿಯನ್ನು ಉಪಯೋಗಿಸಬಾರದು.

ಡಾ. ಹರ್ಷ ಕಾಮತ್