ಗುಣಮಟ್ಟದ ಶಿಕ್ಷಣಕ್ಕೆ ಮತ್ತೊಂದು ಹೆಸರು: ತ್ರಿಶಾ ಸಮೂಹ ಸಂಸ್ಥೆ

ಕರಾವಳಿ ಭಾಗದಲ್ಲಿ ಸತತ 25 ವರ್ಷಗಳಿಂದ ವೃತ್ತಿಪರ ಕೋರ್ಸುಗಳ ಗುಣಮಟ್ಟದ ತರಬೇತಿಯನ್ನು ನೀಡುತ್ತಿರುವ ತ್ರಿಶಾ ಸಂಸ್ಥೆಯು ಉಡುಪಿ , ಮಂಗಳೂರು ಹಾಗೂ ಬೆಂಗಳೂರಿನಲ್ಲಿ ತನ್ನ ಅಂಗ ಸಂಸ್ಥೆಯನ್ನು ಸ್ಥಾಪಿಸಿಕೊಂಡಿದೆ. ತ್ರಿಶಾ ಸಮೂಹ ಸಂಸ್ಥೆಗಳ ಅಡಿಯಲ್ಲಿ ಪದವಿ ಕಾಲೇಜು, ಪದವಿ ಪೂರ್ವ ಕಾಲೇಜುಗಳು ಕಾರ್ಯನಿರ್ವಹಿಸುತ್ತಿದ್ದು , ಸುಮಾರು 75,000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮುಗಿಸಿದ್ದಾರೆ.

ಬಿಕಾಂ ಜೊತೆಗೆ ಸಿಎ , ಸಿ ಎಸ್

ಬಿಕಾಂ ಪದವಿಯೊಂದಿಗೆ ಸಿಎ, ಸಿ ಎಸ್, ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒಂದೇ ಸೂರಿನಡಿ ನೀಡುವ ನಿಟ್ಟಿನಲ್ಲಿ ಆರಂಭವಾದ ಸಂಸ್ಥೆ ( ಡೇ ಹಾಗೂ ಈವನಿಂಗ್ ಕಾಲೇಜು ) ಕಟಪಾಡಿಯಲ್ಲಿ ತ್ರಿಶಾ ವಿದ್ಯಾ ಕಾಲೇಜು ಹಾಗೂ ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು ಮತ್ತು ಮಂಗಳೂರಿನಲ್ಲಿ ತ್ರಿಶಾ ಕಾಲೇಜು ಹಾಗೂ ತ್ರಿಶಾ ಸಂಧ್ಯಾ ಕಾಲೇಜು ಎನ್ನುವ ಶಾಖೆಯನ್ನು ಸ್ಥಾಪಿಸಿಕೊಂಡು ವಿದ್ಯಾರ್ಥಿಗಳಿಗೆ ವಿನೂತನ ಶೈಲಿಯ ಬಿಕಾಂ ಪದವಿಯೊಂದಿಗೆ ಮೌಲ್ಯಧಾರಿತ ವಿಷಯಗಳನ್ನು ಬೋಧಿಸುತ್ತಿದೆ.

ತ್ರಿಶಾ ಸಂಧ್ಯಾ ಕಾಲೇಜು

ಸಿಎ, ಸಿಎಸ್ ನ ಜತೆಗೆ ಪದವಿಯನ್ನು ಪಡೆಯಲು ಸಹಕಾರಿಯಾಗುವ ನಿಟ್ಟಿನಲ್ಲಿ ತ್ರಿಶಾ ಸಂಧ್ಯಾ ಕಾಲೇಜು ಕಾರ್ಯ ನಿರ್ವಹಿಸುತ್ತಿದೆ. ಶಿಕ್ಷಣದ ಜೊತೆಗೆ ಜೀವನ ಕೌಶಲ್ಯಗಳೊಂದಿಗೆ ಉದ್ಯೋಗ ಶಿಕ್ಷಣಕ್ಕೆ ಪೂರಕವಾದ ವಿಷಯಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ನೀಡುತ್ತಿದೆ.

ಬಿಕಾಂ Regular ಮತ್ತು ಫೋಕಸ್ 360 (Focus 360)

ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ, ವ್ಯಕ್ತಿತ್ವ ವಿಕಸನ , ಎಂಬಿಎ ಪರೀಕ್ಷಾ ತಯಾರಿ , ಸ್ವಉದ್ಯಮ ಮಾಡಲು ಬಯಸುವವರಿಗೆ ತ್ರಿಶಾ ಸಂಸ್ಥೆಯು ಫೋಕಸ್ 360 (Focus 360) ಎನ್ನುವ ವಿನೂತನ ಬಿಕಾಂ ಪದವಿಯನ್ನು ನೀಡುತ್ತಲಿದ್ದು, ವಾರದಲ್ಲಿ ಎರಡು ದಿನ ಮೇಲ್ಕಂಡ ವಿಷಯಗಳಿಗೆ ವಿವಿಧ ತಜ್ಞರಿಂದ ತರಬೇತಿಯನ್ನು ನಡೆಸಿ ಜೊತೆಗೆ ಅನೇಕ ಚಟುವಟಿಕೆ ಆಧಾರಿತ ಕಲಿಕೆ ಹಾಗೂ ಕೈಗಾರಿಕಾ ಭೇಟಿ ಅಂತಹ ವಿನೂತನ ಕಲಿಕಾ ಕ್ರಮವನ್ನು ನಡೆಸಲಾಗುವುದು.

ಬಿಸಿಎ (ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ )

ಕಡಿಮೆ ವೆಚ್ಚದಲ್ಲಿ ಕಂಪ್ಯೂಟರ್ ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನವನ್ನು ಕಲಿಯಲು ಸಹಕಾರಿಯಾಗುವ ಕೋರ್ಸ್ ಬಿಸಿಎ. ಪಠ್ಯದ ಕಲಿಕೆಯನ್ನು ಪ್ರಾಯೋಗಿಕ ಅನುಭವದೊಂದಿಗೆ ಸಂಯೋಜಿಸುವ ಮೂಲಕ , ಕಂಪ್ಯೂಟರ್ ಅಪ್ಲಿಕೇಶನ್ಗಳ ಕ್ಷೇತ್ರದಲ್ಲಿ ಪರಿಣಿತರಾಗುವಂತೆ ತ್ರಿಶಾ ಸಂಸ್ಥೆ ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಿದೆ. ಅದಲ್ಲದೆ ದ್ವಿತೀಯ ಹಾಗೂ ತೃತೀಯ ವರ್ಷದ ಬಿ ಸಿ ಎ ನಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ಕ್ಯಾಂಪಸ್ ನಲ್ಲಿಯೇ ಪಡೆಯುವ ಹಲವಾರು ಕಾರ್ಯಾಗಾರವನ್ನು ನಡೆಸಲಾಗುವುದು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆಕರ್ಷಕ ವಿದ್ಯಾರ್ಥಿವೇತನ

ತ್ರಿಶಾ ಸಂಸ್ಥೆಯು ಬಡ ಹಾಗೂ ಪ್ರತಿಭಾನ್ವಿತ ಅರ್ಹ ವಿದ್ಯಾರ್ಥಿಗಳಿಗೆ 2023-24ನೇ ಶೈಕ್ಷಣಿಕ ವರ್ಷದಲ್ಲಿ ಒಟ್ಟು 27.5 ಲಕ್ಷ ರೂಪಾಯಿಗಳ ವಿದ್ಯಾರ್ಥಿವೇತನವನ್ನು ಒದಗಿಸಿದೆ. ಹಾಗೂ ಪ್ರಸ್ತುತ 2024-25 ನೇ ಶೈಕ್ಷಣಿಕ ಸಾಲಿನಲ್ಲಿಯೂ ರಾಜ್ಯ ಬೋರ್ಡ್ (State Board) ಪರೀಕ್ಷೆಯಲ್ಲಿ 90% ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದವರು ಹಾಗೂ CBSE ಬೋರ್ಡ್ ಪರೀಕ್ಷೆಯಲ್ಲಿ 8.0 ಮತ್ತು ಅದಕ್ಕಿಂತ ಹೆಚ್ಚಿನ CGPA ಹೊಂದಿದ ವಿದ್ಯಾರ್ಥಿಗಳಿಗೆ ಸಂಸ್ಥೆಯು ಸುಮಾರು 30 ಲಕ್ಷಗಳಿಂತಲೂ ಹೆಚ್ಚು ವಿದ್ಯಾರ್ಥಿವೇತನವನ್ನು ನೀಡುವ ಗುರಿಯಾಗಿಸಿಕೊಂಡಿದೆ.

ಕೆಲವೇ ಸೀಟುಗಳು ಸೀಮಿತವಾಗಿರುದರಿಂದ ಆಸಕ್ತ ವಿದ್ಯಾರ್ಥಿಗಳು ತ್ರಿಶಾ ಕಾಲೇಜು ಕಟಪಾಡಿ ಮತ್ತು ಮಂಗಳೂರಿಗೆ ಭೇಟಿ ಮಾಡಬಹುದು. ಹಾಗೂ 2024-25 ನೇ ಪಿಯುಸಿಯಲ್ಲಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಜೊತೆಗೆ ಸಿಎ, ಸಿ ಎಸ್, ಸಿಇಟಿ, ಜೆಇಇ , ನೀಟ್ ತರಬೇತಿಗಳಿಗೆ ದಾಖಲಾತಿ ತ್ರಿಶಾ ವಿದ್ಯಾ ಕಾಲೇಜು ಕಟಪಾಡಿ ಮತ್ತು ಶ್ರೀ ರಾಮಾಶ್ರಮ ಪಿಯು ಕಾಲೇಜು ಯೆಯ್ಯಾಡಿ , ಮಂಗಳೂರಿನಲ್ಲಿ ಪ್ರಾರಂಭವಾಗಿದ್ದು , ವಸತಿ ಸೌಲಭ್ಯವನ್ನು ಹೊಂದಿದೆ.

ಹೆಚ್ಚಿನ ಮಾಹಿತಿಗಾಗಿ https://tiny.cc/TrishaCollegeEnquiryForm ಈ ಲಿಂಕ್ ನ ಮೂಲಕ ನೋಂದಾವಣೆ ಮಾಡಬಹುದು.