ಸವಾಲಿನ ಜೊತೆಗೆ ಏನಾದರೂ ಮಾಡಬೇಕೆನ್ನುವ ಉತ್ಸಾಹವಿತ್ತು. ಸಿಎ ಪದವಿಯ ಜವಾಬ್ದಾರಿ ಮತ್ತು ಕಾರ್ಯವೈಖರಿಯನ್ನು ಗಮನದಲ್ಲಿಟ್ಟುಕೊಂಡು ಸಿ.ಎ ಆಗುವ ಕನಸು ಕಂಡು ಆಳ್ವಾಸ್ ಕಾಲೇಜಿನಲ್ಲಿ ಪಿಯು ವಿದ್ಯಾಭ್ಯಾಸಕ್ಕಾಗಿ ಸೇರಿಕೊಂಡೆ. ಸಿಎ ಗೋಪಾಲಕೃಷ್ಣ ಭಟ್ ಅವರ ಪ್ರಶಿಕ್ಷಣ ಕಾರ್ಯಕ್ರಮದಿಂದ ಪ್ರೇರೇಪಣೆಗೊಂಡು ಸಿ.ಎ ಯ ಮೂರು ಹಂತಗಳನ್ನು ‘ತ್ರಿಶಾ ಕ್ಲಾಸಸ್’ ಉಡುಪಿಯಲ್ಲಿ ಪೂರ್ತಿಗೊಳಿಸಿದೆ.
ಉಡುಪಿಯ ‘ಸಿ.ಎ ಸಂಸ್ಥೆ ಸಿಕಾಸ’ ನನ್ನ ವೈಯಕ್ತಿಕ ಬೆಳವಣಿಗೆಯೊಂದಿಗೆ ಶ್ರದ್ಧೆ, ಶಿಸ್ತು, ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ತ್ರಿಶಾ ಸಂಸ್ಥೆಯು ನನ್ನ ಮೊದಲ ಕಾರ್ಯಕ್ಷೇತ್ರವಾದ ಅದ್ವೈತ್ ಕನ್ಸಲ್ಟನ್ಸಿ ಆಯ್ಕೆಯಲ್ಲೂ ಕೂಡ ಸಹಾಯ ಮಾಡಿದೆ. ಅಲ್ಲಿ ಸಿ.ಎ ಕೃಷ್ಣ ಉಪಾದ್ಯ ಸರ್ ಆವರಿಂದ ದೊರೆತ ಮಾರ್ಗದರ್ಶನವನ್ನು ನಾನು ನೆನಪಿಸಿಕೊಳ್ಳುತ್ತೇನೆ. ತ್ರಿಶಾ ಸಂಸ್ಥೆಯಲ್ಲಿ ಬಿಕಾಂ ಪದವಿ ಜೊತೆಗೆ ಸಿ.ಎ ಶಿಕ್ಷಣವು ಸಿಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯೋಗ ವಾಗುತ್ತಿದೆ. ಸಮಗ್ರತೆ,ಪಾರ್ದರ್ಶಕತೆ ಹಾಗೂ ಶ್ರದ್ಧೆಯನ್ನೊಳಗೊಂಡ ಮೌಲ್ಯಾಧಾರಿತ ಹುದ್ದೆಯೇ ಸಿ ಎ ಪದವಿ. ಸತತ ಪರಿಶ್ರಮದೊಂದಿಗೆ ನಂಬಿಕೆ ಇದ್ದಾಗ ಮಾತ್ರ ಸಿ.ಎ ಪದವಿ ಪಡೆಯಲು ಸಾದ್ಯ. ನನ್ನ ಸಿ.ಎ ಪಯಣ ವೃತ್ತಿ ಹಾಗೂ ವ್ಯಕ್ತಿತ್ವಕ್ಕೆ ವರದಾನ ಎಂದು ಹೇಳಲು ನಾನು ಹೆಮ್ಮೆ ಪಡುತ್ತೇನೆ.
ಸಿ.ಎ ಶ್ರೀಲತಾ ಭಟ್ ಎನ್
ತ್ರಿಶಾ ಕ್ಲಾಸಸ್ ಹಳೆ ವಿದ್ಯಾರ್ಥಿನಿ
ಉಡುಪಿ