“ತ್ರಿಶಾ ಕ್ಲಾಸಸ್: ಜೂನ್ 1 ರಿಂದ ಸಿ.ಎ ಫೌಂಡೇಶನ್ ತರಗತಿ ಪ್ರಾರಂಭ”

ಕರಾವಳಿ ಭಾಗದಲ್ಲಿ ವಾಣಿಜ್ಯ ಹಾಗೂ ವೃತ್ತಿಪರ ಶಿಕ್ಷಣದಲ್ಲಿ ಸತತ 28 ವರ್ಷಗಳಿಂದ ತೊಡಗಿಸಿಕೊಂಡಿರುವ ಉಡುಪಿ ಹಾಗೂ ಮಂಗಳೂರಿನಲ್ಲಿಅಂಗ ಸಂಸ್ಥೆಗಳನ್ನು ಸ್ಥಾಪಿಸಿಕೊಂಡಿರುವ ತ್ರಿಶಾ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗಾಗಿ ಸಿ.ಎ ಫೌಂಡೇಶನ್ ತರಗತಿಗಳ ಎರಡನೇ ಬ್ಯಾಚನ್ನು ಜೂನ್ 1ರಿಂದ ಆರಂಭಿಸಲಾಗುತ್ತಿದೆ.

ವೃತ್ತಿಪರ ಕೋರ್ಸ್‌ಗಳಿಗೆ ವಿಶೇಷವಾಗಿ ವಿದ್ಯಾರ್ಥಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ತರಗತಿಗಳನ್ನು ಆಯೋಜಿಸಲಾಗಿದೆ.

ವಿಶೇಷತೆಗಳು

  • ಅಭ್ಯಾಸದ ನೂತನ ವಿಧಾನಗಳು, ರಾಜ್ಯದ ವಿವಿಧ ಭಾಗಗಳಿಂದ ಪ್ರಸಿದ್ಧ ಹಾಗೂ ಅನುಭವಿ ವಿಷಯ ತಜ್ಞರಿಂದ ತರಬೇತಿ, ಅಭ್ಯಾಸಕ್ಕೆ ಪೂರಕವಾಗುವ ಸ್ಟಡಿಮೆಟೀರಿಯಲ್‌ಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿವೆ.
  • ಪರೀಕ್ಷೆಗೆ ಪೂರಕವಾಗುವಂತೆ ಪ್ರಶ್ನೆಪತ್ರಿಕೆಗಳನ್ನು ಉತ್ತರಿಸುವ ವಿಧಾನಗಳನ್ನೂ ತಿಳಿಸಿಕೊಡಲಾಗುವುದು. ತರಬೇತಿಯ ಅಂತ್ಯದಲ್ಲಿ ವಿದ್ಯಾರ್ಥಿಗಳಿಗೆ ಮಾದರಿ ಸಿದ್ಧತಾ ಪರೀಕ್ಷೆಗಳನ್ನು ಆಯೋಜಿಸಲಾಗುವುದು.

ದ್ವಿತೀಯ ಪಿಯುಸಿ ಪರೀಕ್ಷೆ ಪೂರೈಸಿದ ವಿದ್ಯಾರ್ಥಿಗಳು ಈ ತರಗತಿಗಳ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ. ಪ್ರಸ್ತುತ ದ್ವಿತೀಯ ಪಿಯುಸಿ ಪರೀಕ್ಷೆ ಮುಗಿಸಿದ ವಿದ್ಯಾರ್ಥಿಗಳಿಗಾಗಿ ಮಂಗಳೂರು ತ್ರಿಶಾ ಕಾಲೇಜಿನಲ್ಲಿ ಮೇ 31ರಂದು ಪೂರ್ವಾಹ್ನ 10 ಗಂಟೆಗೆ ಹಾಗೂ ತ್ರಿಶಾ ವಿದ್ಯಾ ಕಾಲೇಜು, ಕಟಪಾಡಿಯಲ್ಲಿ ಜೂನ್ 1ರಂದು ಪೂರ್ವಾಹ್ನ 10 ಗಂಟೆಗೆ ಸಿಎ ಫೌಂಡೇಶನ್ ಮಾಹಿತಿಕಾರ್ಯಾಗಾರ ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ತ್ರಿಶಾ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.