ಉಡುಪಿ: ಬುದ್ಧಿಸ್ಟ್ ಸ್ಟಡೀಸನ ಅತ್ಯುನ್ನತ ತ್ರಿಪಿಟಿಕಾಚಾರ್ಯ ಪದವಿ ಪಡೆದ ಪ್ರೊ. ಪದ್ಮನಾಭ ಶ್ರೀವರ್ಮ ಜೈನಿ ನೆಲ್ಲಿಕಾರು ಅಲ್ಪಕಾಲದ ಅಸೌಖ್ಯದಿಂದ ಇಹಲೋಕ ತ್ಯಜಿಸಿದ್ದಾರೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾದ ಇವರು ಅಮೇರಿಕಾದ ಕ್ಯಾಲಿಫೊರ್ನಿಯಾದಲ್ಲಿ ಸ್ವರ್ಗಸ್ಥರಾಗಿದ್ದಾರೆ.
ಪ್ರೊಫೆಸರ್ ಪದ್ಮನಾಭ ಶ್ರೀವರ್ಮ ಜೈನಿ ನೆಲ್ಲಿಕಾರು, ಇವರು ಮೇ 25 ರಂದು ಅಮೇರಿಕಾದ ಕಲಿಫೋರ್ನಿಯಾ ದಲ್ಲಿರುವ ತಮ್ಮ ಸ್ವಗ್ರಹದಲ್ಲಿ ನಿಧನರಗಿದ್ದಾರೆ. ಅವರಿಗೆ 98 ವರ್ಷ ವಯಸ್ಸಾಗಿತ್ತು. ಮೂಡಬಿದಿರೆ ತಾಲೂಕು ನೆಲ್ಲಿಕಾರಿನಲ್ಲಿ ಅಕ್ಟೋಬರ್ 23, 1923ರಲ್ಲಿ ಜನಿಸಿದ ದಿ. ಜೈನಿಯವರು, ಬನಾರಸ್ ಹಿಂದೂ ಯೂನಿವರ್ಸಿಟಿ, ಸ್ಕೂಲ್ ಒಫ್ ಓರಿಯೆಂಟಲ್ ಆಫ್ರಿಕಾನ್ ಸ್ಟಡೀಸ್ ನಲ್ಲಿ ಶಿಕ್ಷಣ ಪಡೆದಿದ್ದರು.
ಯೂನಿವರ್ಸಿಟಿ ಒಫ್ ಮಿಚಿಗನ್ ಹಾಗೂ ಯೂನಿವರ್ಸಿಟಿ ಒಫ್ ಬೆರ್ಕೆಲಿ, ಕಲಿಫೋರ್ನಿಯಾ ದಲ್ಲಿ ಸೇವೆ ಸಲ್ಲಿಸಿದ್ದರು. ಕೊನೆಗೆ ಅವರು ಹೆಡ್ ಒಫ್ ದಿ ಡಿಪಾರ್ಟ್ಮೆಂಟ್ ಆಫ್ ಸೌತ್ ಅಂಡ್ ಸೌತ್ ಈಸ್ಟ್ ಏಶಿಯನ್ ಸ್ಟಡೀಸ್, ಯೂನಿವರ್ಸಿಟಿ ಒಫ್ ಕಲಿಫೋರ್ನಿಯಾ ದಿಂದ ನಿವೃತಿಯನ್ನು ಪಡೆದಿದ್ದರು.
ಜೈನಿಯವರಿಗೆ ಬುದ್ಧಿಸ್ಟ್ ಸ್ಟಡೀಸನ ಅತ್ಯುನ್ನತ ಪದವಿ ಆದ ತ್ರಿಪಿಟಿಕಾಚಾರ್ಯ ವನ್ನು ಸಿಲೋನ್ ದೇಶದ ಪ್ರಧಾನಿ ಸೇನಾನಾಯಿಕೆ ಅವರಿಂದ ನೀಡಲಾಯಿತು. ಅವರು ಹಲವು ಪುಸ್ತಕಗಳು ಹಾಗೂ ರಿಸರ್ಚ್ ಪೇಪರ್ಸ್ ನ್ನು ಬರೆದು ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದವರು.
ಅವರ ಆಟೋಬಿಗ್ರಫಿ ಯೋಗಾಯೋಗ (Coincidences) ಕಳೆದ ವರ್ಷ ಮುದ್ರಣವಾಗಿ ವಿದೇಶದ ಎಲ್ಲಾ ಗ್ರಂಥಾಲಯದಲ್ಲಿದೆ. ಅವರು ಸಂಸ್ಕೃತ, ಪ್ರಾಕೃತ ಹಾಗೂ ಪಾಲಿ ಭಾಷೇಗಳ ಪಾರಂಗತಾರಾಗಿದ್ದರು. ಜೈನ ಹಾಗೂ ಬೌದ್ಧ ಧರ್ಮಗಳ ಬಗ್ಗೇ ಸಾಕಷ್ಟು ರೀಸರ್ಚ್ ಮಾಡಿರುವ ಜೈನಿಯವರು ಪುತ್ರ, ಅಪಾರ ಬಂಧು ಮಿತ್ರರನ್ನು ಆಪ್ತವರ್ಗವನ್ನು ಅಗಲಿದ್ದಾರೆ.