ನವದೆಹಲಿ: ದುಬೈನಲ್ಲಿ ಇದೇ 19ರಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ನ್ಯೂಜಿಲೆಂಡ್ ತಂಡದಲ್ಲಿ ಆಡುವ ಬೆಂಗಳೂರು ಮೂಲದ ಆಲ್‌ರೌಂಡರ್ ರಚಿನ್ ರವೀಂದ್ರ ಅವರಿಗೆ ₹ 50 ಲಕ್ಷ ಮೂಲಬೆಲೆ ನಿಗದಿಯಾಗಿದೆ.1166 ಆಟಗಾರರು ಬಿಡ್‌ಗೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಪಟ್ಟಿಯನ್ನು ಫ್ರ್ಯಾಂಚೈಸಿಗಳಿಗೆ ಕಳುಹಿಸಲಾಗಿದೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿದೆ.ಒಟ್ಟು 77 ಆಟಗಾರರ ಆಯ್ಕೆಗೆ ಅವಕಾಶ ಇದೆ. ಅದರಲ್ಲಿ 30 ವಿದೇಶಿ ಆಟಗಾರರನ್ನು ಖರೀದಿಸಬೇಕು. ಹತ್ತು ತಂಡಗಳು ಸೇರಿ ₹ 262. 95 ಕೋಟಿ ವೆಚ್ಚ ಮಾಡಲು ಅವಕಾಶವಿದೆ.
ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್ ಪಂದ್ಯದ ಹೀರೊ ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಸ್ಟಾರ್ಕ್ ಅವರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಹರಾಜು ಪ್ರಕ್ರಿಯೆಯಲ್ಲಿ ತಲಾ ₹2 ಕೋಟಿ ನಿಗದಿಪಡಿಸಲಾಗಿದೆ. ಭಾರತದ ಬೌಲರ್ ಹರ್ಷಲ್ ಪಟೇಲ್ ಅವರಿಗೂ ಇದೇ ಮೌಲ್ಯ ಇಡಲಾಗಿದೆ.ಆರ್‌ಸಿಬಿಯಿಂದ ಬಿಡುಗಡೆ ಯಾಗಿರುವ ಶ್ರೀಲಂಕಾದ ವಣಿಂದು ಹಸರಂಗಾ ಅವರಿಗೆ ₹ 1.5 ಕೋಟಿ ಮೂಲಬೆಲೆ ನಿಗದಿಪಡಿಸಲಾಗಿದೆ.