ಉಡುಪಿ: ಉಡುಪಿಯ ಆರ್ಟಿಸ್ಟ್ಸ್ ಫೋರಂ ಸದಸ್ಯರ ಚಿತ್ರಕಲೆ ಮತ್ತು ಛಾಯಾಚಿತ್ರ ಕೃತಿಗಳ ಸಂಯುಕ್ತ ಪ್ರದರ್ಶನ ‘ಪಯಣ’ ಫೆ.28ರಿಂದ ಮಾ.2ರವರೆಗೆ ಉಡುಪಿಯ ಅಲಂಕಾರ್ ಥಿಯೇಟರ್ ಹಿಂಭಾಗದಲ್ಲಿರುವ ಗ್ಯಾಲರಿ ದೃಷ್ಠಿಯಲ್ಲಿ ನಡೆಯಲಿದೆ ಎಂದು ಫೋರಂ ಅಧ್ಯಕ್ಷ ರಮೇಶ್ ರಾವ್ ತಿಳಿಸಿದರು.
ಗ್ಯಾಲರಿ ದೃಷ್ಠಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪ್ರದರ್ಶನವನ್ನು ಫೆ.28ರಂದು ಸಂಜೆ 5ಗಂಟೆಗೆ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಉದ್ಘಾಟಿಸಲಿರುವರು.ಪ್ರದರ್ಶನದಲ್ಲಿ ಒಟ್ಟು 27 ಕಲಾವಿದರ ಒಟ್ಟು 40 ಕಲಾಕೃತಿಗಳು ಪ್ರದರ್ಶನಗೊಳ್ಳಲಿದೆ ಎಂದರು.

ಈ ಪ್ರದರ್ಶನದಲ್ಲಿ ರಮೇಶ್ ರಾವ್, ಸಕು ಪಾಂಗಾಳ, ಲಿಯಾಕತ್ ಅಲಿ, ಕುರ್ಶಿದ್ ಯಾಕುಬ್, ಸೀತಾರಾ ರಾವ್, ಜನಾರ್ದನ ಹಾವಂಜೆ, ಜೀವನ್ ಶೆಟ್ಟಿ, ಪ್ರಸಾದ್ ರಾವ್ ಜಿ., ಮಂಜುನಾಥ ಮಯ್ಯ, ರೇಶ್ಮಾ ಶೆಟ್ಟಿ, ಶ್ರೀನಾಥ ಮಣಿಪಾಲ, ಸಪ್ನಾ ನರೋಹ್ನಾ, ಗಣೇಶ್ ಕುಕ್ಕೆಹಳ್ಳಿ, ಮೋನಪ್ಪ ಎಚ್.ಎಸ್., ಥಾಮಸ್ ಎಂ.ಜೆ., ಪವನ್ ಕುಮಾರ್ ಅತ್ತಾವರ, ಸ್ನೇಹಾ ಸುಬ್ರಹ್ಮಣ್ಯ, ಎಚ್.ಕೆ.ರಾಮಚಂದ್ರ, ಡಾ.ಕಿರಣ್ ಆಚಾರ್ಯ, ಸಂತೋಷ್ ಪೈ, ಅಭಿಷೇಕ್ ತಲ್ವಾಲ್ಕರ್, ಜಯವಂತ್, ಸತೀಶ್ಚಂದ್ರ, ರವಿ ಹಿರೆಬೆಟ್ಟು, ವಸಂತ ಹೆಬ್ರಿ, ಆಸ್ಟ್ರೋ ಮೋಹನ್, ಪ್ರವೀಣಾ ಮೋಹನ್ ಸೇರಿದಂತೆ ಹಲವು ಕಲಾವಿದರ ಕೃತಿಗಳು ಪ್ರದರ್ಶಿಸಲ್ಪಡಲಿವೆ. ಪ್ರದರ್ಶನವು ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ ಎಂದು ಅವರು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಫೋರಂ ಕಾರ್ಯದರ್ಶಿ ಸಕು ಪಾಂಗಾಳ, ಪವನ್ ಕುಮಾರ್ ಅತ್ತಾವರ ಉಪಸ್ಥಿತರಿದ್ದರು.

















