ಉಡುಪಿ: ನಿರುದ್ಯೋಗಿ ಯುವಕ/ ಯುವತಿಯರಿಗೆ ಉಚಿತ ತರಬೇತಿ

ಉಡುಪಿ: ಕೇಂದ್ರೀಯ ಪ್ಲಾಸ್ಟಿಕ್ಸ್ ತಂತ್ರಜ್ಞಾನ ಸಂಸ್ಥೆ (ಸಿಪೆಟ್),  ವತಿಯಿಂದ  ವಿದ್ಯಾರ್ಹತೆ ಹೊಂದಿರುವ ನಿರುದ್ಯೋಗಿ ಯುವಕ ಯುವತಿಯರಿಗೆ  ಮೈಸೂರಿನಲ್ಲಿ ವಿವಿಧ ವೃತ್ತಿಪರ ಯೋಜನೆಯಡಿ 03 ಮತ್ತು 06 ತಿಂಗಳ ಆವಧಿಯ ಪಾಲಿಮರ್ ವಸ್ತುಗಳ ತಯಾರಿಕ ತಂತ್ರಜ್ಞಾನ, ವಾಹನಗಳ ಬಿಡಿಭಾಗಗಳು, ವಿದ್ಯುತ್ ಉಪಕರಣಗಳು, ಕಂಪ್ಯೂಟರ್ ಬಿಡಿಭಾಗಗಳು, ಇತ್ಯಾದಿ ವಸ್ತುಗಳ ತಯಾರಿಕೆಯ ಬಗ್ಗೆ ತರಬೇತಿಯನ್ನು ಉಚಿತ ಊಟ, ವಸತಿಯೊಂದಿಗೆ ನೀಡಲಾಗುವುದು ಹಾಗೂ ಉದ್ಯೋಗಾವಕಾಶಕ್ಕೆ ನೆರವು ನೀಡಲಾಗುವುದು.

ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂದಿಸಿದ ಅಂಕಪಟ್ಟಿ, ಜಾತಿ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಮೂಲ ದಾಖಲೆ, 04 ಪಾಸ್ ಪಾಸ್ ಪೋರ್ಟ್  ಅಳತೆಯ ಫೋಟೋಗಳೊಂದಿಗೆ ನೇರವಾಗಿ ಬಂದು ದಾಖಲಾತಿ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ಸ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಹೆಬ್ಬಾಳು ಕೈಗಾರಿಕಾ ಪ್ರದೇಶ, ಮೈಸೂರು, ದೂರವಾಣಿ ಸಂಖ್ಯೆ: 7899986444, 9141075968, 906664866 ನ್ನು ಸಂಪರ್ಕಿಸುವಂತೆ ಸಿಪೆಟ್‍ನ ಪ್ರಕಟಣೆ ತಿಳಿಸಿದೆ.