ಉಡುಪಿ: ಭಾರತೀಯ ಅಂಚೆ ಇಲಾಖೆಯ ಉಡುಪಿ ವಿಭಾಗದ ಸುಮಾರು ತನ್ನ ನೌಕರರಿಗಾಗಿ 750 ಮಿಕ್ಕಿ ನೌಕರರಿಗೆ ಕೇಂದ್ರ ಸರಕಾರದ ಇಲಾಖೆಯ ಹೊಸ ಯೋಜನೆಯ ಬಗ್ಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಗುರುವಾರದಂದು ನಡೆಯಿತು.
ಉಡುಪಿ ಅಂಚೆವಿಭಾಗದ ಅಧೀಕ್ಷಕ ನವೀನ್ ಚಂದರ್ ಮೂಳೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಇಲಾಖೆಯ ಜಿ. ಡಿ. ಕೆ ರಿಫ್ರಶರ್ ಮತ್ತು ಪಾರ್ಸೆಲ್ ಡಿ.ಇ.ಪಿ ಹಾಗೂ ಡಾಕ್ ಕರ್ಮಯೋಗಿ ಪೋರ್ಟಲ್ ಅಡಿಯಲ್ಲಿ ತರಬೇತಿ ನೀಡಲಾಗಿದೆ. ಈ ತರಬೇತಿಯು ಮುಖ್ಯವಾಗಿದ್ದು, ಇಲಾಖೆಯ ವಿವಿಧ ಯೋಜನೆ ಒಅಳಗೊಂದು ಸಾರ್ವಜನಿಕರು ಬಹಳಷ್ಟು ಯೋಜನೆಗಳ ಪ್ರಯೋಜನ ಪಡೆಯಬಹುದು. ಇಲಾಖೆಯಲ್ಲಿ ಅಧಿಕ ಬೋನಸ್ ನೀಡುವ ಅಂಚೆ ಜೀವ ವಿಮೆ ಸೌಲಭ್ಯ ಇದೆ ಎಂದು ಅವರು ಹೇಳಿದರು.
ಈ ಸಂಧರ್ಭದಲ್ಲಿ ತರಬೇತಿದಾರ ಪ್ರವೀಣ್ ಜತ್ತನ್ ಹಾಗೂ ರಾಘವೇಂದ್ರ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಠ್ಠಲ್ ಭಟ್ಟ್ , ವಸಂತ ಮತ್ತು ಅಂಚೆ ನಿರೀಕ್ಷಕ ಶಂಕರ್ ಲಮಾಣಿ ಉಪಸ್ಥಿತರಿದ್ದರು.