ಡಿ.14 ರಂದು ಬನ್ನಾಡಿ ಬ್ರಹ್ಮಬೈದರ್ಕಳ ಸಾಂಪ್ರದಾಯಿಕ ಕಂಬಳ.

ಉಡುಪಿ: ಇತಿಹಾಸ ಪ್ರಸಿದ್ಧ ಬನ್ನಾಡಿ ಬ್ರಹ್ಮ ಬೈದರ್ಕಳ ಸಾಂಪ್ರದಾಯಿಕ ಕಂಬಳವು ಡಿಸೆಂಬರ್ 14 ರಂದು ಜರಗಲಿದೆ.

ರಾಜಧಾನಿ ಬೆಂಗಳೂರು ಸಹಿತ ಪರ ಊರುಗಳಲ್ಲಿರುವ ಕಂಬಳಾಭಿಮಾನಿಗಳ ಅಪೇಕ್ಷೆ ಹಾಗೂ ಒತ್ತಾಯದ ಮೇರೆಗೆ ಈಸಾಲಿನ ಬನ್ನಾಡಿ ಕಂಬಳವನ್ನು ಭಾನುವಾರದಂದು ನಡೆಸಲು ನಿಶ್ಚಯಿಸಿದ್ದೇವೆ.

ಬನ್ನಾಡಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ದಿನಾಂಕ 15.12.2025ನೇ ಸೋಮವಾರ “ಅಗಲು ಸೇವೆ” ಮತ್ತು 16.12.2025ನೇ ಮಂಗಳವಾರ “ಹಾಲು ಹಬ್ಬ” ಕಾರ್ಯಕ್ರಮ ಜರಗಲಿವೆ ಎಂದು ಪ್ರಕಟನೆ ತಿಳಿಸಿದೆ.