ಉಡುಪಿ: ದೀಪಾವಳಿ ಪ್ರಯುಕ್ತ ಪೆರ್ಣಂಕಿಲ ಶಂಕರ ಪ್ರತಿಷ್ಠಾನದ ವತಿಯಿಂದ ಸಾಂಪ್ರದಾಯಿಕ ಗೂಡು ದೀಪ ಸ್ಪರ್ಧೆಯನ್ನು ಅ.26 ರಂದು ಬುಧವಾರ ಸಂಜೆ 4 ಗಂಟೆಯಿಂದ ಕಾಪು ಬೀಚ್ ನಲ್ಲಿ ಆಯೋಜಿಸಲಾಗಿದ್ದು, ವಿಜೇತರಿಗೆ ನಗದು ಬಹುಮಾನ ದೊರೆಯಲಿದೆ.
ಮೊದಲನೆ ಬಹುಮಾನ: 11,111ರೂ
ಎರಡನೆ ಬಹುಮಾನ: 7,777ರೂ
ಮೂರನೆ ಬಹುಮಾನ: 5,555ರೂ
ಕಾರ್ಯಕ್ರಮದಲ್ಲಿ ಸುದುಮದ್ದು ಪ್ರದರ್ಶನವಿರಲಿದೆ ಎಂದು ಪ್ರತಿಷ್ಠಾನದ ಸಂಚಾಲಕ ಪೆರ್ಣಂಕಿಲ ಶ್ರೀಶ ನಾಯಕ್ ತಿಳಿಸಿದ್ದಾರೆ.
ಸ್ಪರ್ಧೆಯ ನಿಯಮಗಳು:
# ಮೂಲೆಗಳಿರುವ ಗೂಡು ದೀಪ ಕಡ್ಡಾಯ
# ಬಣ್ಣದ ಕಾಗದ, ಗ್ಲಾಸ್ ಪೇಪರ್ ಅಥವಾ ಬೆಗಡೆ ಉಪಯೋಸಿರಬೇಕು
# ಪ್ಲಾಸ್ಟಿಕ್, ಫ್ಲೆಕ್ಸ್, ಫೈಬರ್, ಥರ್ಮಾಕಾಲ್, ಹೂವು, ಮರ, ಗ್ಲಾಸ್ ಇತ್ಯಾದಿಗಳನ್ನು ಉಪಯೋಗಿಸಿದರೆ ಸ್ಪರ್ಧೆಯಲ್ಲಿ ಪರಿಗಣಿಸುವುದಿಲ್ಲ
# ಬಾಲ ಇರಲೇಬೇಕು
# ಸ್ಪರ್ಧೆಗೆ ವಯೋಮಿತಿ ಇಲ್ಲ
# ತೀರ್ಪುಗಾರರ ನಿರ್ಣಯ ಅಂತಿಮ
ಹೆಚ್ಚಿನ ಮಾಹಿತಿಗಾಗಿ ಪ್ರವೀಣ್ ಪೂಜಾರಿ: 9886619748, ಸಂತೋಷ್ ಕುಮಾರ್: 9008169918 ಇವರನ್ನು ಸಂಪರ್ಕಿಸಲು ಕೇಳಿಕೊಳ್ಳಲಾಗಿದೆ.