ಮಲ್ಪೆ ಬೀಚ್ ನಲ್ಲಿ ಮುಳುಗಿದ ಪ್ರವಾಸಿಗರು: ಓರ್ವ ಸಾವು, ಇಬ್ಬರ ರಕ್ಷಣೆ

ಉಡುಪಿ: ಮಲ್ಪೆ ಬೀಚ್‌ನಲ್ಲಿ ಅಲೆಗಳ ಸೆಳೆತಕ್ಕೆ ಸಿಲುಕಿದ್ದ ಮೂವರು ಪ್ರವಾಸಿಗರ ಪೈಕಿ ಇಬ್ಬರನ್ನು ರಕ್ಷಣೆ ಮಾಡಲಾಗಿದ್ದು ಓರ್ವ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆಯ ದಾಬೆ ಬೇಲೂರು ನಿವಾಸಿ ಗಿರೀಶ್ ಮೃತ ವ್ಯಕ್ತಿ.

ಹಾಸನ ಜಿಲ್ಲೆಯಿಂದ ಪ್ರವಾಸಕ್ಕೆ ಬಂದಿದ್ದ 20 ಜನರ ತಂಡ ಮಲ್ಪೆ ಬೀಚ್‌ನಲ್ಲಿ ಈಜಾಡುವಾಗ ಮೂವರು ಅಲೆಗಳ ಸೆಳೆತಕ್ಕೆ ಸಿಲುಕಿದ್ದರು. ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ರಕ್ಷಣಾ ಸಿಬ್ಬಂದಿ ಮೂವರನ್ನು ದಡಕ್ಕೆ ಎಳೆದು ತಂದಿದ್ದಾರೆ.

ಗಂಭೀರ ಸ್ಥಿತಿಯಲ್ಲಿದ್ದ ಗಿರೀಶ್ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟರೆ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.