ಉಡುಪಿ: ತೀವ್ರ ನಷ್ಟದಲ್ಲಿರುವ ಟೂರ್ ಆಪರೇಟರ್ ಗಳಿಗೆ ಸರಕಾರ ನೆರವಾಗುವಂತೆ ಮನವಿ

ಉಡುಪಿ:ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವಲಯಗಳಿಗೆ  ಕೊರೋನಾ ಲಾಕ್ ಡೌನ್ ಗಂಭೀರವಾದ ಪರಿಣಾಮವನ್ನುಂಟು ಮಾಡಿದ್ದು ತೀವ್ರ ನಷ್ಟದಿಂದ ಚೇತರಿಸಿಕೊಳ್ಳಲು ಆಗದಷ್ಟು ಹೊಡೆತ ಈ ವಲಯಗಳಿಗೆ ಬಿದ್ದಿದೆ. ಅದರಲ್ಲೂ ಪ್ರವಾಸೋದ್ಯಮವನ್ನೆ ನಂಬಿಕೊಂಡಿದ್ದ  ಟೂರ್  ಆಪರೇಟರ್ ಗಳಂತೂ ತೀವ್ರ ನಷ್ಟ ಅನುಭವಿಸುತ್ತಿದ್ದಾರೆ. ಸರಕಾರದ ಮಾನ್ಯತೆ ಪಡೆದ ಟೂರ್ ಓಪರೇಟ್ ಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು  ಉಡುಪಿಯ ಪ್ರತಿಷ್ಠಿತ ಟೂರ್ ಒಪರೇಟ್ ಪಯಣ ಟ್ರಾವೆಲ್ಸ್ ಸಂಸ್ಥೆಯ ಮಾಲಕ ಉದಯ ಕೆ ಶೆಟ್ಟಿ ಮನವಿ ಮಾಡಿದ್ದಾರೆ.

ಯಾವುದೇ ಪುಣ್ಯಕ್ಷೇತ್ರಗಳಿಗೆ ಪ್ರವಾಸಿಗರು ಹೋಗಲು ಸಾಧ್ಯವಾಗುತ್ತಿಲ್ಲ. ರೈಲು-ವಿಮಾನಗಳು ಸರಿಯಾದ ಸಂಖ್ಯೆಯಲ್ಲಿ ಓಡುತ್ತಿಲ್ಲ. ಇವೆಲ್ಲಾ ಮತ್ತೆ ಮೊದಲಿನಂತೆ ಆಗಲು ವರ್ಷಗಳೇ ಬೇಕಾಗುತ್ತೆ. ಅಲ್ಲಿಯ ತನಕ ಜೀವನ ನಡೆಸುವುದು ಹೇಗೆ ಅನ್ನೋ ಆತಂಕದಲ್ಲಿದ್ದೇವೆ

ನಾವು ಅಧಿಕೃತ ಟೂರ್ ಆಪರೇಟರ್ ಗಳು. ಕಳೆದ ಹಲವಾರು ವರ್ಷಗಳಿಂದ ಪ್ರವಾಸೋದ್ಯಮವೇ ನಮ್ಮನ್ನು ಕೈಹಿಡಿದು ನಡೆಸುತ್ತಿದೆ.  ಆದರೆ ಕೊರೋನಾ ಬಿಕ್ಕಟ್ಟಿನಿಂದ ನಾವು ಸಂಕಷ್ಟ ಅನುಭವಿಸುತ್ತಿದ್ದೇವೆ. ನಮ್ಮ ಸಂಸ್ಥೆಯಲ್ಲಿಯೂ ಉದ್ಯೋಗಿಗಳಿದ್ದಾರೆ. ಆದರೆ ಇದೀಗ  ಯಾವುದೇ ಉತ್ಪತ್ತಿ ಇಲ್ಲದೇ ಅವರಿಗೆ ಸಂಬಳ ಕೈಯಿಂದಲೇ ಕೊಡಬೇಕಾದ ಸ್ಥಿತಿಗೆ ಬಂದಿದ್ದೇವೆ. ಕಳೆದ ವರ್ಷವೂ ನಮ್ಮ ಪರಿಸ್ಥಿತಿ ಭಾರೀ ಕಷ್ಟದಲ್ಲಿದು. ಕಳೆದ ಲಾಕ್ ಡೌನ್ ನಿಂದ ಮುಚ್ಚಿರುವ ಈ ಸಂಸ್ಥೆಗಳು ಇನ್ನೂ ಒಂದು ವರ್ಷ ಆದರೂ ತೆರೆಯುವುದು ಕಷ್ಟ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಈ ವರ್ಷವೂ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದೇವೆ. ಸದ್ಯ ಲಾಕ್ ಡೌನ್ ಮುಗಿದರೂ ನಮಗೆ ದೂರದ ರಾಜ್ಯಗಳಿಗೆ, ಪ್ರವಾಸಿಗರಿಗೆ ಸೇವೆ ನೀಡಲು ಕೊರೋನಾ ಹಾವಳಿಯಿಂದಾಗಿ ಸಾಧ್ಯವಾಗುವುದು ಕಷ್ಟ.  ಸರಕಾರದ ಮಾನ್ಯತೆ ಪಡೆದ ಟೂರ್ ಓಪರೇಟ್ ಗಳ ಬಗ್ಗೆ ಸರ್ಕಾರ ಗಮನ ಹರಿಸಬೇಕು  ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.