ನಾಳೆ ಉಡುಪಿ ಜಿಲ್ಲಾ ಹೊಟೇಲ್ ಉದ್ದಿಮೆದಾರರ ಸಹಕಾರಿ ಸಂಘ ನೂತನ ಕಚೇರಿಗೆ ಸ್ಥಳಾಂತರ 

ಉಡುಪಿ: ಸಿಟಿ ಬಸ್ ಸ್ಟ್ಯಾಂಡ್ ಹತ್ತಿರ ರಾಜ್ ಟವರ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉಡುಪಿ ಜಿಲ್ಲಾ ಹೋಟೆಲ್ ಉದ್ದಿಮೆದಾರರ ಸಹಕಾರಿ ಸಂಘವು ಮೇ. 21 (ನಾಳೆ) ಪಿಪಿಸಿ ಕ್ರಾಸ್ ರಸ್ತೆಯ ಆಶಾಚಂದ್ರ ಟ್ರೇಡ್ ಸೆಂಟರ್ ನಲ್ಲಿನ ನೂತನ ಕಚೇರಿಗೆ ಸ್ಥಳಾಂತರಗೊಳ್ಳಲಿದೆ.

ಹೋಟೆಲ್ ಉದ್ಯಮದಲ್ಲಿ ತೊಡಗಿಕೊಂಡವರು ಹಾಗೂ ಇತರ ಗ್ರಾಹಕರಿಗೆ ಸಾಲ ಸೌಲಭ್ಯ ಒದಗಿಸುವ ಉದ್ದೇಶದಿಂದ ಆರಂಭಗೊಂಡ ಹೋಟೆಲ್ ಉದ್ದಿಮೆದಾರರ ಸಹಕಾರಿ ಸಂಗವು ಕಳೆದ ಏಳು ವರ್ಷಗಳಿಂದ ಗ್ರಾಹಕರ ಸೇವೆಯಲ್ಲಿ ತೊಡಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಗ್ರಾಹಕರಿಗೆ ಹೆಚ್ಚಿನ ಸವಲತ್ತು ಒದಗಿಸುವ ಉದ್ದೇಶದಿಂದ, ಪಾರ್ಕಿಂಗ್ ವ್ಯವಸ್ಥೆಯಿರುವ ಆಶಾಚಂದ್ರ ಟ್ರೇಡ್ ಸೆಂಟರ್ ನ ನೆಲ ಮಹಡಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ನೂತನ ಕಚೇರಿಗೆ ಸ್ಥಳಾಂತರಗೊಳ್ಳಲಿದೆ.

ಭಾನುವಾರ ಬೆಳಿಗ್ಗೆ 9ಕ್ಕೆ ನಡೆಯುವ ಸ್ಥಳಾಂತರ ಸಮಾರಂಭದಲ್ಲಿ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರು ನೂತನ ಕಚೇರಿ ಉದ್ಘಾಟಿಸಲಿದ್ದು, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಅಧ್ಯಕ್ಷ ಡಾ| ತಲ್ಲೂರು ಶಿವರಾಮ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.