ಟೊಮ್ಯಾಟೊ ಕುಚ್ ಕುಚ್ ಮೇಲೆ ಆಗ್ತದೆ “ಕುಚ್ ಕುಚ್”: ಮನೆಲೇ ಮಾಡಿ ನೋಡಿ ಈ ರುಚಿಕರ ಪಾಕ

ಟೊಮ್ಯಾಟೊ ಕುಚ್ ಕುಚ್ ಅನ್ನೋದು ಒಂದು ರುಚಿಕರ ಪಾಕ. ಬ್ಯಾಚುಲರ್ ಊಟಕ್ಕೆ ಈ ಕುಚ್ ಕುಚ್ ಮಾಡಿದರೆ ಸಾಕು ಹೊಟ್ಟೆಗೂ ಈ ರುಚಿಯ ಮೇಲೆ ಕುಚ್ ಕುಚ್ ಆಗಲು ಶುರು. ಕುಚ್ ಕುಚ್ ಮಾಡೋದು ಹೇಗೆ?  ಇಲ್ಲಿದೆ ಮಾಹಿತಿ.
ಏನೇನ್ ಬೇಕು
ಟೊಮ್ಯಾಟೊ 1, ಅಡುಗೆ ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನ ಬೇಳೆ ಒಗ್ಗರಣೆಗೆ ತಕ್ಕಷ್ಟು, ಅರಿಶಿನ, ಹಸಿಮೆಣಸಿನಕಾಯಿ, ಉಪ್ಪು
ಮಾಡುವ ವಿಧಾನ:
ಒಂದು ಟೊಮ್ಯಾಟೊವನ್ನು ಉದ್ದುದ್ದವಾಗಿ, ತೆಳ್ಳಗೆ ಹೆಚ್ಚಿಕೊಳ್ಳಿ. ನಂತರ ಬಾಣಲೆಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಜೀರಿಗೆ, ಹಸಿಮೆಣಸಿನಕಾಯಿ, ಉದ್ದಿನ ಬೇಳೆ, ಅರಿಶಿನ ಸೇರಿಸಿ ಒಗ್ಗರಣೆ ಹಾಕಿ. ನಂತರ ಹೆಚ್ಚಿಟ್ಟ ಟೊಮ್ಯಾಟೊವನ್ನು ಹಾಕಿ ಹುರಿಯಿರಿ. ಟೊಮ್ಯಾಟೊ ಚೆನ್ನಾಗಿ ಬೆಂದು ನೀರು ಬಿಟ್ಟು ಬೆರೆತ ನಂತರ ಉಪ್ಪು ಸೇರಿಸಿದರೆ ಸವಿಯಲು ಸಿದ್ಧ.
-ಬಿ.ಸಂ.ಸುವರ್ಚಲಾ