ನವಿರಾದ ಸಂಸಾರದ ಕತೆ ಹೇಳಲು ಹೊರಟ “ಟಾಮ್ and ಜೆರ್ರಿ ಸಂಸಾರ”: ರಿಲೀಸಾಯ್ತು ಚೆಂದದ ಟ್ರೈಲರ್

ಗಂಡ-ಹೆಂಡತಿಯ ದಾಂಪತ್ಯ ಜೀವನದ ಘಟನೆಗಳನ್ನು ಪೋಣಿಸುತ್ತ, ಹಾಸ್ಯದ ಕಚಕುಳಿ ನೀಡುತ್ತ ಮುಂದೇನಾಗಲಿದೆ, ಬರೀ ಇಷ್ಟನ್ನೇ ಅಲ್ಲ ಇನ್ನೂ ಏನನ್ನೋ ಹೇಳಲು ಸಿನಿಮಾ ತಂಡ ಪ್ರಯತ್ನಿಸಿದಂತೆ ಈ ಟ್ರೈಲರ್ ಚೂರು ಹಿಂಟ್ ಬಿಟ್ಟುಕೊಟ್ಟಿದೆ. ಆದ್ರೆ ಕುತೂಹಲ ಬಿಟ್ಟು ಕೊಟ್ಟಿಲ್ಲ.

 ಈ ಕಾಲದ ಪ್ರೇಕ್ಷಕರು ಒಪ್ಪುವ, ಪ್ರೇಕ್ಷಕರಿಗೆ ಕಾಡುವ ಸಂಗತಿಗಳು ಇಲ್ಲಿರಲಿವೆ ಎನ್ನುವ ನಿರೀಕ್ಷೆ ಟ್ರೈಲರ್ ನೋಡಿ ಹುಟ್ಟುವುದಂತೂ ಖಂಡಿತಾ

ಅಂದ ಹಾಗೆ, ಅಶೋಕ್ ಕುಮಾರ್ ಅವರು ಕತೆ ಬರೆದು ನಿರ್ದೇಶಿಸಿರುವ ಈ ಸಿನಿಮಾಗೆ ಸುಮಂತ್ ಆಚಾರ್ಯ ಅವರ ಕ್ಯಾಮರಾ ಕಟ್ಸ್ ಇದೆ. ರೋಹಿತ್ ಸೋವರ್ ಅವರ ಸಂಗೀತವಿದೆ. ಕಾಫಿ ಡಬ್ಬಿ ಎಂಟರ್ ಟ್ರೈನ್ ಮೆಂಟ್ ನಿಂದ ಸಿನಿಮಾ ಸೆಟ್ಟೇರಲಿದೆ. ಪ್ರತೀಕ್, ಪಾಯಲ್ ಚೆಂಗಪ್ಪ,ಸುವೀಶ್, ಪೂಜಾ ಮಹಾದೇವ್ ಮೊದಲಾದ ಪ್ರತಿಭಾವಂತ ಕಲಾವಿದರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಸದ್ಯ ಟ್ರೈಲರ್ ನಿಂದ ಸದ್ದು ಮಾಡಿರೊ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಿ ಪ್ರೇಕ್ಷಕರನ್ನು ರಂಜಿಸಲಿದೆ.