ರಂಗು ರಂಗಾಯಿತು ಬಯಲು ರಂಗಮಂದಿರ: ಮಹಿಳಾ ಶಕ್ತಿಯ ಅನಾವರಣದ ಪವರ್ ಪರ್ಬಕ್ಕೆ ಇಂದು ಕೊನೆ ದಿನ

ಉಡುಪಿ: ಮಹಿಳೆಯರಿಂದ, ಮಹಿಳೆಯರಿಗಾಗಿ, ಮಹಿಳಿಯರಿಗೋಸ್ಕರ ನಡೆಯುತ್ತಿರುವ ಪವರ್ ಪರ್ಬದಲ್ಲಿ ಕಳೆದೆರಡು ದಿನಗಳಿಂದ ಮಹಿಳಾ ಶಕ್ತಿಯ ಅನಾವರಣವಾಗುತ್ತಿದೆ. ಬೀಡಿನಗುಡ್ಡೆಯ ಮಹಾತ್ಮಾ ಗಾಂಧಿ ಬಯಲು ರಂಗಮಂದಿರವು ರಂಗು ರಂಗಾಗಿದೆ.

Image

100ಕ್ಕೂ ಹೆಚ್ಚು ಮಳಿಗೆಗಳು, ತರಹೇವಾರಿ ಖಾದ್ಯ ಉತ್ಪನ್ನಗಳು, ಆಟದ ವಿಭಾಗಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರನ್ನು ರಂಜಿಸುತ್ತಲಿವೆ. ಇಂದು ಪವರ್ ಪರ್ಬದ ಕೊನೆಯ ದಿನವಾಗಿದ್ದು, ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.

ಬಳಿಕ 7 ಗಂಟೆಗೆ ಪ್ರಶಾಂತ್ ಮತ್ತು ತಂಡದವರಿಂದ ಸಮೂಹ ನೃತ್ಯ ಕಾರ್ಯಕ್ರಮವಿದೆ.

ವಸ್ತುಪ್ರದರ್ಶನವು ಬೆಳಿಗ್ಗೆ 10 ರಿಂದ ಸಂಜೆ 9 ರವರೆಗೆ ತೆರೆದಿದ್ದು, ಪ್ರವೇಶ ಶುಲ್ಕ ಪ್ರತಿವ್ಯಕ್ತಿಗೆ 20 ರೂ ಮಾತ್ರ.