ಇಂದು 20 ಏಪ್ರಿಲ್ 2023ರ ಮೊದಲ ಸೂರ್ಯ ಗ್ರಹಣ- ಇದು ಭಾರತದಲ್ಲಿ ಗೋಚರಿಸುತ್ತದೆಯೇ?

ಬೆಂಗಳೂರು: ಈ ವರ್ಷದ ಮೊದಲ ಸೂರ್ಯ ಗ್ರಹಣ ಇಂದು (ಏಪ್ರಿಲ್ 20) ಸಂಭವಿಸಲಿದೆ. ಸೂರ್ಯ ಮತ್ತು ಭೂಮಿ ನಡುವೆ ಚಂದ್ರನ ಆಗಮನದ ಹಿನ್ನೆಲೆ ಭೂಮಿ ಮೇಲೆ ಚಂದ್ರನ ನೆರಳು ಹಾದುಹೋಗುವುದರಿಂದ ಉಂಗುರ ಆಕಾರ ಏರ್ಪಡಲಿದೆ. ಆದ ಕಾರಣ ಇದನ್ನು ಬೆಂಕಿಯ ಉಂಗುರ ಅಥವಾ ಹೈಬ್ರಿಡ್ ಸೂರ್ಯಗ್ರಹಣ ಎಂದೂ ಕರೆಯಲಾಗುತ್ತದೆ.

ಅಪರೂಪದ ಹೈಬ್ರಿಡ್ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ದಕ್ಷಿಣ ಫೆಸಿಫಿಕ್‌ನಲ್ಲಿ ಗ್ರಹಣ ಗೋಚರಿಸಲಿದೆ. ಚಂದ್ರನ ನೆರಳು ಪಶ್ಚಿಮ ಆಸ್ಟ್ರೇ ಲಿಯಾ, ಪೂರ್ವ ತಿಮೋರ್, ಇಂಡೋನೇಷ್ಯಾ ಮೂಲಕ ಹಾದುಹೋಗಲಿದೆ.ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಭಾರತೀಯ ಕಾಲಮಾನ ಬೆಳಿಗ್ಗೆ 7:04ಕ್ಕೆ ಸೂರ್ಯ ಗ್ರಹಣ ಆರಂಭವಾಗಲಿದ್ದು, ಸಂಪೂರ್ಣ ಸೂರ್ಯಗ್ರಹಣ 08:07ಕ್ಕೆ ಸಂಭವಿಸುತ್ತದೆ. ರಾತ್ರಿ 9:46ಕ್ಕೆ ಉತ್ತುಂಗಕ್ಕೆ ತಲುಪುತ್ತದೆ. 11:26ರಿಂದ ಗ್ರಹಣ ಅಂತ್ಯಕಾಲ ಆರಂಭವಾಗುತ್ತದೆ. ಭಾಗಶಃ ಸೂರ್ಯಗ್ರಹಣ ಮಧ್ಯಾಹ್ನ 12:29ಕ್ಕೆ ಅಂತ್ಯವಾಗುತ್ತದೆ.