ಚಳಿಗಾಲದಲ್ಲಿ ಕಂಡುಬರುವ ಆರೋಗ್ಯ ಸಮಸ್ಯೆಗಳು ಹಲವಾರು.ಅದರಲ್ಲೂ ಚರ್ಮದ ಆರೋಗ್ಯದ ಕುರಿತು ಈ ಕಾಲದಲ್ಲಿ ಎಷ್ಟು ಕಾಳಜಿ ಮಾಡಿದರೂ ಸಾಲದು. ತ್ವಚೆ ಒಡೆಯುವುದು, ತುಟಿ ಒಣಗಿ ಬಿರುಕು, ಪಾದಗಳಲ್ಲಿ ಬಿರುಕು ಕಂಡು ಬರುವುದು, ಕೂದಲು ಒಣಗುವುದು ಮೊದಲಾದ ಸಮಸ್ಯೆಗಳು ಶುರುವಾದಾಗ ತಲೆಬಿಸಿ ಮಾಡಿಕೊಳ್ಳುವವರಿದ್ದಾರೆ.ಡೋಂಟ್ ವರಿ.ಇಲ್ಲಿ ನಾವು ಕೆಲವೊಂದು ಸುಲಭ ಪರಿಹಾರಗಳನ್ನು ನೀಡಿದ್ದೇವೆ. ಇಷ್ಟು ಮಾಡಿ ಸಾಕು.
ಕೆಫಿನ್ ಅಂಶವಿರುವ ತಿನಿಸುಗಳನ್ನು ಮತ್ತು ಮದ್ಯವನ್ನು ಆದಷ್ಟು ಕಡಿಮೆ ಮಾಡಿ
ಮುಖದ ಕಾಂತಿಗೆ ದೇಹದಲ್ಲಿ ನೀರಿನಂಶ ಹೆಚ್ಚಾಗಿ ಇರಬೇಕಾಗುತ್ತದೆ. ಅದಕ್ಕಾಗಿ ಪ್ರತಿನಿತ್ಯ ಸಾಕಷ್ಟು ನೀರು ಕುಡಿಯಬೇಕಾಗುತ್ತದೆ.ಆದಷ್ಟು ನೀರನ್ನು ಜಾಸ್ತಿ ಕುಡೀರಿ.
ಚಳಿಗಾಲದಲ್ಲಿ ಸ್ನಾನಕ್ಕೆ ಉಗುರು ಬೆಚ್ಚಗಿನ ನೀರನ್ನು ಬಳಸಬೇಕು. ಚಳಿ ಎಂಬ ಕಾರಣದಿಂದ ಅತಿ ಹೆಚ್ಚು ಬಿಸಿಯಾದ ನೀರು ಬಳಸುವುದು ಚರ್ಮಕ್ಕೆ ಒಳ್ಳೆಯದಲ್ಲ.
ಮೈಗೆ ಮಾಶ್ಚರೈಸಿಂಗ್ ಸೋಪ್ ಅನ್ನೇ ಆದಷ್ಟು ಬಳಸಿ.
ಚಳಿಗಾಲದಲ್ಲಿ ಮೈ ಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ, ಬಳಿಕ ಸ್ನಾನ ಮಾಡಿದರೆ ಚರ್ಮಕ್ಕೆ ಹಿತಕಾರಿ.
ಚಳಿಗಾಲದಲ್ಲಿ ತುಟಿ ಒಣಗಿದರೆ. ತುಟಿಗೆ ತುಪ್ಪ ಆಥವಾ ಹಾಲಿನ ಕೆನೆಯನ್ನು ಹಚ್ಚಿ, ಆಗ ತುಟಿ ಒಡೆಯುವುದಿಲ್ಲ.
ಸ್ನಾನ ಮಾಡುವ ಮುಂಚೆ ಎರಡು ಚಮಚ ಸಕ್ಕರೆಗೆ ಎರಡು ಚಮಚ ಎಣ್ಣೆ ಹಾಕಿ ಮಿಶ್ರಣ ಮಾಡಿ ಮೈ ಸ್ಕ್ರಬ್ ಮಾಡಿ. ಇದು ನಿರ್ಜಿವ ತ್ವಚೆಯನ್ನು ಹೋಗಲಾಡಿಸುತ್ತದೆ ಮತ್ತು ತ್ವಚೆಯ ಹೊಳಪು ನೀಡುತ್ತದೆ.