udupixpress
Home Trending ಬಂಟ್ವಾಳ: ಶೂ ಧರಿಸಿ ವಿಗ್ರಹ ಪೀಠದೆದುರು ಟಿಕ್ ಟಾಕ್; ನಾಲ್ವರ ಬಂಧನ

ಬಂಟ್ವಾಳ: ಶೂ ಧರಿಸಿ ವಿಗ್ರಹ ಪೀಠದೆದುರು ಟಿಕ್ ಟಾಕ್; ನಾಲ್ವರ ಬಂಧನ

ಮಂಗಳೂರು: ಶೂ ಧರಿಸಿ ವಿಗ್ರಹ ಪೀಠದೆದುರು ಟಿಕ್ ಟಾಕ್ ವಿಡಿಯೋ ಮಾಡಿದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಜೀಪನಡು ಗ್ರಾಮದ ಮೊಹಮ್ಮದ್ ಮಸೂದ್, ಮೊಹಮ್ಮದ್ ಅಜೀಮ್, ಅಬ್ದುಲ್ ಲತೀಫ್, ಮೊಹಮ್ಮದ್ ಅರ್ಫಾಜ್ ಬಂಧಿತ ಆರೋಪಿಗಳು.

ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ಕಂಚಿನಡ್ಕಪದವು ಎಂಬಲ್ಲಿ ಘಟನೆ ನಡೆದಿದೆ. ಹಿಂದೂ ರುದ್ರಭೂಮಿಯಲ್ಲಿ ಪ್ರತಿಷ್ಠಾಪಿಸಿರುವ ಶಿವನ ವಿಗ್ರಹದ ಸುತ್ತ ಶೂ ಧರಿಸಿ, ವಿಗ್ರಹ ಪೀಠದ ಮೇಲೆ ಕುಳಿತು ಓಡಾಡಿ ಟಿಕ್ ಟಾಕ್ ವಿಡಿಯೋ ಮಾಡಿದ್ದರು. ದೂರು ಬಂದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಬಂಧನವಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

error: Content is protected !!