ಪೈನ್‌ಹರ್ಸ್ಟ್ (ಅಮೆರಿಕ): ಅಮೆರಿಕದಲ್ಲಿ ನಡೆಯುತ್ತಿರುವ 6 ರಿಂದ 12 ವರ್ಷ ವಯಸ್ಸಿನ ಬಾಲಕ – ಬಾಲಕಿಯರ ವಿಶ್ವಚಾಂಪಿಯನ್ ಶಿಪ್‌ನಲ್ಲಿ ಭಾರತೀಯ ಮೂವರು ಪುಟ್ಟ ಕ್ರೀಡಾ ಪಟುಗಳು ಟಾಪ್-5 ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಇದರಲ್ಲಿ 6 ವರ್ಷದೊಳಗಿನ ಬಾಲಕರ ವಿಭಾಗದ ಗಾಲ್ಫ್ ಆಟದಲ್ಲಿ ನಿಹಾಲ್ ಚೀಮಾ ದ್ವಿತೀಯ ಸ್ಥಾನ ಪಡೆದು ಮಿಂಚಿದ್ದಾನೆ. ಇನ್ನು ಕಬೀರ್ ಗೋಯಲ್ 4 ನೇ ಸ್ಥಾನ ಪಡೆದುಕೊಂಡಿದ್ದರೆ, ಓಜಸ್ವಿನಿ ಸಾರಸ್ವತ್ ಎಂಬ ಬಾಲಕಿ, ಬಾಲಕಿಯರ ವಿಭಾಗದಲ್ಲಿ ಐದನೇ ಸ್ಥಾನ ಗಿಟ್ಟಿಸಿಕೊಂಡು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಅಮೆರಿಕಾದಲ್ಲಿ ಕಿಡ್ಸ್ ವರ್ಲ್ಡ್ ಚಾಂಪಿಯನ್ಸ್ ನಡೆಯುತ್ತಿದ್ದು ಭಾರತದ ಪುಟ್ಟ 3 ಕ್ರೀಡಾ ಸ್ಫರ್ಧಿಗಳು ಟಾಪ್ 5 ರಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಬಾಲಕರ ಅಂಡರ್ 6 ರಲ್ಲಿ ನಿಹಾಲ್ ಚೀಮಾ 2 ಸ್ಟ್ರೋಕ್ಗಳೊಂದಿಗೆ 34 ಕಾರ್ಡ್ ಹೊಡೆದರು. ಮತ್ತೊಂದು ಸುತ್ತಿನಲ್ಲಿ ಪಾರ್ -5 ರಲ್ಲಿ ಆರನೇ ಹೋಲ್ನಲ್ಲಿ 4ನೇ ಒಂದು ಬರ್ಡಿ ಬಾರಿಸಿದನು. ಈ ಸ್ಟ್ರೋಕ್ನಲ್ಲಿ ಅಮೆರಿಕದ ಬಾಲಕ ಬ್ರಾಡ್ಲಿ ಫರ್ಗುಸನ್‌ರಿಗಿಂತ ಒಂದು ಸ್ಟ್ರೋಕ್ ಮಾತ್ರವೇ ಹಿಂದಿದ್ದ.
ಭಾರತೀಯ ತಂಡದಿಂದ ಉತ್ತಮ ಪ್ರದರ್ಶನ ನೀಡಿದ ಮತ್ತೊಬ್ಬಳು ಓಜಸ್ವಿನಿ ಸಾರಸ್ವತ್ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತೆ. ಈಕೆ 10 ವರ್ಷದ ಕೆಳಗಿನ ಬಾಲಕಿಯರಲ್ಲಿ ಪಾರ್ 72 ಅನ್ನು ಸಹ ಹೊಡೆದು ಐದನೇ ಸ್ಥಾನವನ್ನು ಪಡೆದರು.ಇನ್ನು ಬಾಲಕರ ವಿಭಾಗದ 8 ವರ್ಷದೊಳಗಿನ ಸ್ಪರ್ಧೆ ಮತ್ತು 9 ವರ್ಷದೊಳಗಿನ ಬಾಲಕಿಯರ ವಿಭಾಗದ ಆಟದಲ್ಲಿ ಒಂಬತ್ತು- ಹೋಲ್ ಕೋರ್ಸ್‌ಗಳಲ್ಲಿ ಈ ಗಾಲ್ಫ್ ಆಡಲಾಗುತ್ತದೆ. ಆಟದ ಲೇಔಟ್‌ಗಳು ಸ್ಪರ್ಧಿಗಳ ವಯಸ್ಸಿನ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ನಿಹಾಲ್ ಚೀಮಾರಂತೆ ಸಾಧನೆ ಮಾಡಿದ ಇನ್ನೊಬ್ಬ ಭಾರತೀಯ ಬಾಲಕ ಕಬೀರ್ ಗೋಯಲ್ ಮಿಡ್ ಪೈನ್ಸ್ನಲ್ಲಿ ಪಾರ್ 36 ರಲ್ಲಿ ಅಧಿಕ ಅಂಕಗಳಿಸುವ ಮೂಲಕ 4ನೇ ಸ್ಥಾನ ಗಿಟ್ಟಿಸಿಕೊಳ್ಳುವಂತೆ ಮಾಡಿತು. 4ನೇ ಸ್ಥಾನ ಪಡೆದ 9 ಸ್ಪರ್ಧಿಗಳಲ್ಲಿ ಕಬೀರ್ ಗೋಯಲ್ ಕೂಡ ಒಬ್ಬನಾಗಿದ್ದಾನೆ.
ಅಮೆರಿಕ ಕಿಡ್ಸ್ ಗಾಲ್ಫ್ ವರ್ಲ್ಡ್ ಚಾಂಪಿಯನ್ಶಿಪ್ವು, ಜೂನಿಯರ್ ಗಾಲ್ಫ್ ಸ್ಕೋರ್‌ಬೋರ್ಡ್ ಮತ್ತು ಅಮೆರಿಕನ್ ಜೂನಿಯರ್ ಗಾಲ್ಫ್ ಅಸೋಸಿಯೇಷನ್‌ಗೆ ಶ್ರೇಯಾಂಕಿತವಾಗಿದೆ.7 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಪೈಕಿ, ವೇದಿಕಾ ಬನ್ಸಾಲಿ ತನ್ನ ಒಂಬತ್ತು-ಹೋಲ್ ರೌಂಡ್ ಅನ್ನು ಸಮ-ಪಾರ್ 36 ನೊಂದಿಗೆ ತೆರೆದರು ಮತ್ತು ಟೈಡ್-ಒಂಬತ್ತನೇ ಸ್ಥಾನದಲ್ಲಿ ಅಗ್ರ-10 ರಲ್ಲಿದ್ದರು, ಆದರೆ ಅವರ ಸಹ ಆಟಗಾರ್ತಿ ಅಹಾನಾ ಶಾ 2-ಓವರ್ 38 ಅನ್ನು ಹೊಡೆದು 13 ನೇ ಸ್ಥಾನ ಪಡೆದರು.