ಈಶಾನ್ಯ ಫ್ರಾಂಟಿಯರ್ ರೈಲ್ವೆ ನೇಮಕಾತಿ 2022: ಅಪ್ರೆಂಟಿಸ್ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನಾಂಕ

ನವದೆಹಲಿ: ನಾರ್ತ್ ಈಸ್ಟ್(ಈಶಾನ್ಯ) ಫ್ರಾಂಟಿಯರ್ ರೈಲ್ವೇಯಲ್ಲಿ ಸಾವಿರಾರು ಅಪ್ರೆಂಟಿಸ್ ಹುದ್ದೆಗಳಿಗಾಗಿ ರೈಲ್ವೆ ಇಲಾಖೆಯು ಅಧಿಸೂಚನೆಯನ್ನು ಹೊರಡಿಸಿದೆ. ಹುದ್ದೆಗೆ ಅರ್ಹರಾಗಿರುವ ಅಭ್ಯರ್ಥಿಗಳು ಈಶಾನ್ಯ ಫ್ರಾಂಟಿಯರ್ ರೈಲ್ವೆನ ಅಧಿಕೃತ ವೆಬ್ ಸೈಟ್‌ nfr.indianrailways.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗಳ ನೇಮಕಾತಿಗೆ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಈ ನೇಮಕಾತಿಯ ಮೂಲಕ 5636 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 30.

ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು:
ಈ ರೈಲ್ವೇ ನೇಮಕಾತಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಯು ಮಾನ್ಯತೆ ಪಡೆದ ಸಂಸ್ಥೆಯಿಂದ ಕನಿಷ್ಠ 50 ಶೇಕಡಾ ಅಂಕಗಳೊಂದಿಗೆ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಇದರ ಜೊತೆಗೆ, ಅರ್ಜಿದಾರರು ಸಂಬಂಧಿತ ಕ್ಷೇತ್ರದಲ್ಲಿ ಐಟಿಐ ಮಾಡಿರಬೇಕು.

ವಯೋಮಿತಿ:
ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 15 ವರ್ಷದಿಂದ 24 ವರ್ಷದೊಳಗಿರಬೇಕು.

ನೇಮಕಾತಿ ಪ್ರಕ್ರಿಯೆ:
ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ:
ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ನೇಮಕಾತಿಗಾಗಿ ರೂ 100 ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್/ಇಂಟರ್ನೆಟ್ ಬ್ಯಾಂಕಿಂಗ್ ಇತ್ಯಾದಿಗಳನ್ನು ಬಳಸಿಕೊಂಡು ಮೊತ್ತವನ್ನು ಪಾವತಿಸಬಹುದು.

ಹುದ್ದೆಗಳ ವಿವರ:
ಕತಿಹಾರ್ ಮತ್ತು ಟಿಡಿಎಚ್ ವರ್ಕ್ ಶಾಪ್ ಗಳಿಗೆ 919 ಹುದ್ದೆಗಳು, ಅಲಿಪುರ್‌ ದುವಾರ್‌ಗೆ 522 ಹುದ್ದೆಗಳು, ರಂಗೀಯಕ್ಕೆ 551 ಹುದ್ದೆಗಳು, ಲುಮ್ಡಿಂಗ್‌ಗೆ 1140 ಹುದ್ದೆಗಳು, ತಿನ್ಸುಕಿಯಾಕ್ಕೆ 547 ಹುದ್ದೆಗಳು, ನ್ಯೂ ಬೊಂಗೈಗಾಂವ್‌ನ ವರ್ಕ್ ಶಾಪ್ ಗೆ 1,110 ಹುದ್ದೆಗಳು ಮತ್ತು ಡಿಬ್ರುಗಡ್ ನಲ್ಲಿ 847 ಹುದ್ದೆಗಳಿಗೆ ಅನುಮೋದನೆ ನೀಡಲಾಗಿದೆ.