ನ. 21ರಂದು ತೋನ್ಸೆ ಕಂಬಳ: ಬಹುಮಾನಗಳೇನು ವಿವರ ಇಲ್ಲಿದೆ

ಕುಂದಾಪುರ: ಕೆಮ್ಮಣ್ಣು ತೋನ್ಸೆ ಪಡುಮನೆ ವರ್ಷಾವಧಿ ಕಂಬಳ ತೋನ್ಸೆ ಪಡುಮನೆ ಕಂಬಳಗದ್ದೆಯಲ್ಲಿ ಇದೇ ಬರುವ ನವೆಂಬರ್ 21ರಂದು ನಡೆಯಲಿದೆ.

ಬಹುಮಾನಗಳ ವಿವರ: ಹಗ್ಗ ಹಿರಿಯ ವಿಭಾಗ: ಪ್ರಥಮ- ₹10 ಸಾವಿರ, ದ್ವಿತೀಯ 5 ಸಾವಿರ.

ಹಗ್ಗ ಕಿರಿಯ ವಿಭಾಗ: ₹10 ಸಾವಿರ, ದ್ವಿತೀಯ ₹5 ಸಾವಿರ.

ಹಲಗೆ ವಿಭಾಗ: ₹10 ಸಾವಿರ, ದ್ವಿತೀಯ ₹5 ಸಾವಿರ.
ಕಂಬಳದಲ್ಲಿ ಭಾಗಹಿಸಿದ ಪ್ರತಿ ಕೋಣಗಳ ಮಾಲೀಕರಿಗೂ ₹ 1 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಕಂಬಳ ಸಮಿತಿ ತಿಳಿಸಿದೆ.