ಬೆಂಗಳೂರು: ಕರ್ನಾಟಕ ಸರ್ಕಾರವು ನೆರೆಯ ಮಹಾರಾಷ್ಟ್ರದಂತೆ ಅಂಗಡಿಗಳಲ್ಲಿ ಹಾಗೂ ಸೂಪರ್ ಮಾರ್ಕೆಟ್ ಗಳಲ್ಲಿ ವೈನ್ ಮಾರಾಟಕ್ಕೆ ಅವಕಾಶ ನೀಡಲು ಚಿಂತನೆ ನಡೆಸಿದೆ.
ಮಹಾರಾಷ್ಟ್ರ ಕ್ಯಾಬಿನೆಟ್ 100 ಚದರ ಮೀಟರ್ ಪ್ರದೇಶಗಳಲ್ಲಿ ಹರಡಿರುವ ಅಂಗಡಿಗಳು ಹಾಗೂ ಸೂಪರ್ ಮಾರ್ಕೆಟ್ ಗಳಲ್ಲಿ ವೈನ್ ಮಾರಾಟಕ್ಕೆ ಅವಕಾಶ ನೀಡಿದೆ. ಈ ಹೊಸ ಕ್ರಮವು ದ್ರಾಕ್ಷಿ ಬೆಳೆಯುವ ರೈತರಿಗೆ ಹಾಗೂ ಕೈಗಾರಿಕೆಗೆ ಸಹಾಯಕವಾಗಿದೆ.
ನಮ್ಮ ಅಧಿಕಾರಿಗಳ ತಂಡವು ಶೀಘ್ರವೇ ಮಹರಾಷ್ಟ್ರಕ್ಕೆ ಭೇಟಿ ನೀಡಿ ಇದರ ಸಾಧಕ-ಭಾದಕಗಳನ್ನು ಅಧ್ಯಯನ ಮಾಡಿ ವರದಿ ನೀಡಲಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.
ಅಬಕಾರಿ ಇಲಾಖೆಯ ಮೂಲಗಳ ಪ್ರಕಾರ ಈ ಯೋಜನೆ ಜಾರಿಗೆ ತರುವುದರಿಂದ ಜನರಿಗೆ ಸಹಾಯವಾಗುವುದಾದರೆ ಈ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಪರಿಗಣಿಸಬಹುದು. ಹಾಗೂ ಕರ್ನಾಟಕ ಈ ವಿಧಾನವನ್ನು ಶೀಘ್ರವೇ ಅಳವಡಿಸಿಕೊಳ್ಳಲಿದೆ. ಅಂಗಡಿಗಳಲ್ಲಿ ವೈನ್ ಮಾರಾಟಕ್ಕಷ್ಟೇ ಅನುಮತಿ ನೀಡುತ್ತೇವೆ. ವೈನ್ ಸೇವಿಸಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದೆ.