ಮಂಗಳೂರು: ಇಲ್ಲಿನ ಲಾಲ್ ಬಾಗ್ ಸಿಗ್ನಲ್ ಬಳಿಯಲ್ಲಿ ಖಾಸಗಿ ಬಸ್ಸೊಂದು ವೇಗದಿಂದ ಬಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕನೊಬ್ಬನ ಮರಣ ಸಂಭವಿಸಿದೆ.
ನೀರುಮಾರ್ಗದ ಧನು(13) ಎಂಬ ಬಾಲಕ ಮೃತಪಟ್ಟ ದುರ್ದೈವಿ.
ತನ್ನ ಸಂಬಂಧಿ ಜೊತೆ ಸ್ಕೂಟರಿನಲ್ಲಿ ಹಿಂಬದಿ ಸವಾರನಾಗಿ ಹೋಗುತ್ತಿದ್ದ ವೇಳೆಯಲ್ಲಿ ಹಿಂದಿನಿಂದ ಬಂದ ಬಸ್ ಡಿಕ್ಕಿ ಹೊಡೆದದ್ದರಿಂದ ಸ್ಕೂಟರ್ ಚಲಾಯಿಸುತ್ತಿದ್ದ ಸಂಬಂಧಿ ಎಡಗಡೆಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಧನು ಬಲಗಡೆಗೆ ಬಿದ್ದಿದ್ದು, ಆತನ ಮೇಲೆ ಬಸ್ ನ ಚಕ್ರ ಹಾದು ಹೋಗಿದೆ. ಇದರಿಂದಾಗಿ ಧನು ಮೃತಪಟ್ಟಿದ್ದಾರೆ.
ಘಟನೆಗೆ ಬಸ್ ಚಾಲಕನ ನಿರ್ಲಕ್ಷ್ಯವೆ ಕಾರಣ ಎಂದು ವರದಿಯಾಗಿದೆ.