ಅಮೆರಿಕದಲ್ಲೂ ಟಿಕ್ ಟಾಕ್ ಸಹಿತ ಚೀನಾದ ಆಪ್ ಗಳ ನಿಷೇಧಕ್ಕೆ ಚಿಂತನೆ: ಡೊನಾಲ್ಡ್ ಟ್ರಂಪ್

ನವದೆಹಲಿ: ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಚೀನಾದ ವಿಡಿಯೊ ಆ್ಯಪ್ ಟಿಕ್ ಟಾಕ್ ಅನ್ನು ಅಮೆರಿಕದಲ್ಲಿ ನಿಷೇಧ ಮಾಡಲು ಚಿಂತನೆ ನಡೆಸುತ್ತಿದ್ದೇವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಟಿಕ್ ಟಾಕ್ ಗೆ ಪರ್ಯಾಯವಾಗಿ ನೂತನ ಆ್ಯಪ್ ಆವಿಷ್ಕಾರ ನಡೆಸಲು ನಾವು ಪ್ರಯತ್ನ ಮಾಡುತ್ತಿದ್ದು, ನಾವು ಟಿಕ್ ಟಾಕ್ ಕಾರ್ಯವೈಕರಿಯ ಕುರಿತು ನಿಗಾ ವಹಿಸಿದ್ದೇವೆ. ಟಿಕ್ ಟಾಕ್ ಗೆ ಹೋಲುವ ಆಪ್ ಆವಿಷ್ಕಾರಿಸಿದ ಮೇಲೆ ನಾವು ಟಿಕ್ ಟಾಕ್ ಅನ್ನು ನಿಷೇಧಿಸಬಹುದು ಎಂದು ಅವರು ಹೇಳಿದ್ದಾರೆ.
ಚೀನಾದ ಟಿಕ್ ಟಾಕ್ ದೇಶದ ಭದ್ರತೆಗೆ ದಕ್ಕೆ ತರಬಹುದಾಗಿದ್ದು, ಚೀನಾ ಅಪ್ಲಿಕೇಷನ್ ಗಳನ್ನು ನಿಷೇಧಿಸುವ ತೀರ್ಮಾನ ಮಾಡಲಿದೆ ಎಂದು ಅಮೆರಿಕ ರಾಜ್ಯ ಕಾರ್ಯದರ್ಶಿ ಮೈಕ್ ಪಾಂಪಿಯೋ ಹೇಳಿದ್ದಾರೆ.