ಹಿರಿಯಡ್ಕ: ಇಲ್ಲಿನ ಓಂತಿಬೆಟ್ಟು ಶಾಲೆಯ ಸಮೀಪದ ನಿವಾಸಿ ಶಂಕರ ಟಿ ಎಂಬವರು ತಮ್ಮ ಪತ್ನಿ ಜೊತೆ ದೇವಸ್ಥಾನಕ್ಕೆ ತೆರಳಿದ್ದು, ವಾಪಾಸು ಬರುವಷ್ಟರಲ್ಲಿ ಕಳ್ಳರು ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನಗೈದ ಪ್ರಕರಣ ಸೋಮವಾರ ಮಧ್ಯಾಹ್ನ ನಡೆದಿದೆ.
ಕಳ್ಳತನಗೈದ ಚಿನ್ನಾಭರಣದ ಒಟ್ಟು ತೂಕ 242 ಗ್ರಾಂ ಆಗಿದ್ದು ಮೌಲ್ಯ 8,50,000 ರೂ ಎಂದು ಅಂದಾಜಿಸಲಾಗಿದೆ. ಜೊತೆಗೆ 40 ಸಾವಿರ ರೂನ ಕ್ಯಾಮರಾ ಮತ್ತು 20 ಸಾವಿರ ನಗದು ಕಳ್ಳತನವಾಗಿದೆ.
ಸೋಮವಾರ ಮಧ್ಯಾಹ್ನ 12 ರಿಂದ 1 ಗಂಟೆ ಮಧ್ಯದ ಅವಧಿಯಲ್ಲಿ ಘಟನೆ ನಡೆದಿದೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.