ನಿಮ್ಮ ಈ ಹವ್ಯಾಸಗಳೇ ಜೀವಕ್ಕೆ ಮಾರಕವಾಗಬಹುದು ಜೋಕೆ!

ವಯಸ್ಸು ಜಾಸ್ತಿಯಾಗುತ್ತಿದ್ದಂತೆಯೇ ಹುಮ್ಮಸ್ಸೂ ಕುಸಿಯತೊಡಗುತ್ತದೆ. ಯೌವ್ವನದಲ್ಲಿರುವ ಉಲ್ಲಾಸ ಕ್ರಮೇಣ ಮರೆಯಾಗುತ್ತದೆ.ಉಲ್ಲಾಸ ಕಡಿಮೆಯಾದಂತೆ ಆರೋಗ್ಯದಲ್ಲಿಯೂ ಏರು ಪೇರಾಗುತ್ತದೆ. ಹೀಗಾಗಲು ಪ್ರಮುಖ ಕಾರಣ ನಮ್ಮ ಜೀವನಶೈಲಿ ಮತ್ತು ಕೆಲವೊಂದು ಹವ್ಯಾಸಗಳು ಎಂದರೆ ನೀವು ಒಪ್ಪಿಕೊಳ್ಳಲೇಬೇಕು.ಯಾವೆಲ್ಲಾ ಹವ್ಯಾಸಗಳಿಂದ ಆರೋಗ್ಯ ಏರುಪೇರಾಗುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ.

ಕೆಟ್ಟ ಜೀವನಶೈಲಿ, ಕೆಲವೊಂದು ಅಭ್ಯಾಸಗಳು ವ್ಯಕ್ತಿ ವಯಸ್ಸಾಗಿ ಕಾಣುವಂತೆ ಮಾಡುತ್ತದೆ ಎಂದು ವಿಜ್ಞಾನ ಹೇಳುತ್ತದೆ. ಎಲ್ಲರೂ ತಾವೂ ಯಾವಾಗಲೂ ಯಂಗ್ ಆಗಿ ಕಾಣಬೇಕೆಂದೇ ಇಷ್ಟಪಡುತ್ತಾರೆ. ಯಾವ ಹವ್ಯಾಸಗಳು ನಮಗೆ ಹೆಚ್ಚು ವಯಸ್ಸಾದಂತೆ ಕಾಣುವುದು ಎಂಬುದನ್ನು ಅರಿತುಕೊಂಡು ನೀವು ಹವ್ಯಾಸಗಳನ್ನು ಬಿಡುವುದು ಸೂಕ್ತ

ಜಾಸ್ತಿ  ಟಿವಿ ಎದುರು ಕೂತರೆ?

ಕೆಲವರು ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಟಿವಿ ನೋಡುವುದನ್ನೇ ತಮ್ಮ ಹವ್ಯಾಸ ಮಾಡಿಕೊಂಡಿರುತ್ತಾರೆ.. ಊಟ ತಿಂಡಿ ಮಾಡುವುದು ತಪ್ಪಿದರೂ ಸಹ ಅವರು ಟಿವಿ ನೋಡುವುದು ತಪ್ಪಿಸುವುದಿಲ್ಲ. ಹೀಗಾಗಿ ದಿನಪೂರ್ತಿ ಟಿವಿಯ ಎದುರು ಕುಳಿತುಕೊಳ್ಳುವ ಪರಿಪಾಠದಿಂದ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.. ಇದು ಮೆದುಳಿನ ಮೇಲೆ ಇರುವ ತೀವ್ರ ಪರಿಣಾಮ ಬೀರಲಿದೆ.
ಅಮೇರಿಕನ್ ಹಾರ್ಟ್ ಅಸೋಸಿಯೇಷನ್‌ನ ಸಂಶೋಧನೆಯ ಪ್ರಕಾರ, ಈ ರೀತಿ ನಿರಂತರವಾಗಿ ಟಿವಿ ನೋಡುವುದು ಆಲೋಚನಾ ಕೌಶಲ್ಯಗಳ ನಷ್ಟಕ್ಕೆ ಕಾರಣವಾಗಬಹುದು ಎಂದು ತಿಳಿದುಬಂದಿದೆ. ಟಿವಿಯ ಮುಂದೆ ನಿರಂತರವಾಗಿ ಕುಳಿತಿರುವುದರಿಂದ ದೇಹದಲ್ಲಿ ಯಾವುದೇ ಚಟುವಟಿಕೆಗಳು ಆಗುವುದಿಲ್ಲ ಎಂದು ತಿಳಿದುಬಂದಿದೆ.

ನಿದ್ರೆ ಬಂದಿಲ್ಲ ನಂಗೆ ನಿದ್ದೆ ಬಂದಿಲ್ಲ: ಈ ಡೈಲಾಗ್ ಕೆಲವೊಬ್ಬರು ಹೇಳುತ್ತಲೇ ಇರುತ್ತಾರೆ . ಕೆಲವರು ಅತಿಯಾಗಿ ನಿದ್ರೆ ಮಾಡುವ ಹವ್ಯಾಸ ಇಟ್ಟುಕೊಂಡಿರುತ್ತಾರೆ.. ಇನ್ನು ಕೆಲವರು ಕಡಿಮೆ ನಿದ್ರೆ ಮಾಡುವ ಹವ್ಯಾಸ ಹೊಂದಿರುತ್ತಾರೆ. ಆದರೆ ಹೀಗೆ ಸರಿಯಾಗಿ ನಿದ್ರೆ ಮಾಡದೇ ಇರುವ ಅಭ್ಯಾಸ ದೇಹದ ಮೇಲೆ ತೀವ್ರ ಪರಿಣಾಮ ಬೀರಲಿದೆ. ದೇಹಕ್ಕೆ ಕಡಿಮೆ ನಿದ್ದೆ ಯಾದರೆ ಸುಸ್ತು, ನಿಶ್ಯಕ್ತಿ ಉಂಟಾಗುತ್ತದೆ. ಹೆಚ್ಚು ನಿದ್ದೆಯಾದರೆ ಸೋಮಾರಿತನ ಕಾಣಿಸಿಕೊಳ್ಳುತ್ತದೆ. ಹೀಗಾಗಿ ದೇಹಕ್ಕೆ ಅಗತ್ಯವಾಗಿ ಬೇಕಾದಷ್ಟು ನಿದ್ರೆಯಾದರೆ ಮಾತ್ರ ಸಾಕು. ಹೀಗಾಗಿ ನಿಯಮಿತ ನಿದ್ರೆಯ ವೇಳಾಪಟ್ಟಿಯನ್ನು ಅನುಸರಿಸುವುದು ಬೆಸ್ಟ್.
ಯಾವಾಗ್ ನೋಡಿದ್ರೂ ಆನ್ ಲೈನ್‌:  ಬೆಳಗ್ಗೆ ಎದ್ದಾಗಿನಿಂದ ಸಂಜೆ ಮಲಗುವವರೆಗೂ ಕೆಲವರಿಗೆ ಮೊಬೈಲ್ ಲ್ಯಾಪ್ಟಾಪ್ ಬಳಕೆ ಬೇಕೆ ಬೇಕು. ಸೋಶಿಯಲ್ ಮೀಡಿಯಾ ಎಂಬ ಅಂತರ್ಜಾಲ ತಾಣದಲ್ಲಿ ಮುಳುಗಿಹೋಗುವ ಜನರು ತಮ್ಮ ಎಲ್ಲಾ ಹವ್ಯಾಸಗಳನ್ನು ಮರೆತುಬಿಡುತ್ತಾರೆ.. ಕೆಲವರು ತಡರಾತ್ರಿಯವರೆಗೂ ಆನ್ಲೈನ್ನಲ್ಲಿ ಇದ್ದು ಸರಿಯಾಗಿ ನಿದ್ರೆ ಕೂಡ ಮಾಡುವುದಿಲ್ಲ.

ಆದರೆ ಈ ರೀತಿ ಹೆಚ್ಚು ಸಮಯವನ್ನು ಆನ್ ಲೈನ್‌ನಲ್ಲಿ ಕಳೆಯುವುದು ಬೇಗನೇ ವಯಸ್ಸಾಗುವಂತೆ ಮಾಡುತ್ತದೆ. ಕಂಪ್ಯೂಟರ್‌ಗಳು, ಸ್ಮಾರ್ಟ್‌ಫೋನ್‌ಗಳು ಮತ್ತು ಅವುಗಳಿಂದ ಹೊರಸೂಸುವ ನೀಲಿ ಬೆಳಕು ದೀರ್ಘಕಾಲದ ವರೆಗೆ ದೇಹಕ್ಕೆ ಬೀಳುವುದರಿಂದ ಇದು ವಯಸ್ಸು ಆಗುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಏಜಿಂಗ್ ಅಂಡ್ ಮೆಕ್ಯಾನಿಸಮ್ಸ್ ಆಫ್ ಡಿಸೀಸ್‌ನಲ್ಲಿ ಪ್ರಕಟವಾದ ಅಧ್ಯಯನವು ನೀಲಿ ಬೆಳಕು ಮೆದುಳು ಮತ್ತು ಕಣ್ಣಿನ ಕೋಶಗಳನ್ನು ಹಾನಿಗೊಳಿಸಬಹುದು ಎಂದು ತಿಳಿಸಿದೆ.ಹಾಗಾಗಿ ಎಷ್ಟು ಬೇಕೋ ಅಷ್ಟು ಮಾತ್ರ ಇಂಟರ್ ನೆಟ್ ಬಳಸಿ.
ಒತ್ತಡ: ಕೆಲಸದ ಒತ್ತಡ ಎಲ್ಲರನ್ನು ಬಹುವಾಗಿ ಕಾಡುತ್ತಿರುವ ಸಮಸ್ಯೆ. ಒತ್ತಡದಿಂದಲೇ ಮಾನಸಿಕ ಖಿನ್ನತೆ ಕಾಡುತ್ತದೆ. ಮನಸ್ಸಿನ ಮೇಲೆ ಪರಿಣಾಮ ಬೀರಲಿರುವ  ಒತ್ತಡದಿಂದ ದೇಹದ ಆರೋಗ್ಯ ಕೂಡ ಹದಗೆಡುತ್ತದೆ. ಯಾವಾಗ ಮನುಷ್ಯ ಮನಸ್ಸಿನ ಮೇಲೆ ಒತ್ತಡ ಹಾಕುತ್ತಾನೋ ಆಗ ತನ್ನ ದೇಹ ಕಾಳಜಿಯ ಬಗ್ಗೆ ಮರೆತು ಬಿಡುತ್ತಾನೆ. ಹೀಗಾಗಿ ಸದಾ ಒತ್ತಡ ನಿರ್ವಹಣೆಯ ಮಾಡುವುದನ್ನು ಮನುಷ್ಯ ಕಲಿತುಕೊಳ್ಳಬೇಕು.. ಇದರಿಂದ ಮುಖದಲ್ಲಿ ಸುಕ್ಕು ನೆರಿಗೆಗಳು ಮೂಡುವುದಿಲ್ಲ.ಒತ್ತಡವನ್ನು ಕಡಿಮೆ ಮಾಡಲು ವ್ಯಾಯಾಮ, ಪ್ರಾಣಯಾಮ, ವಾಕಿಂಗ್, ಸುಂದರ ಮಾತುಕತೆ, ಉತ್ತರ ಹವ್ಯಾಸಗಳನ್ನು ರೂಢಿಸೋದು ಒಳ್ಳೆಯದು.