ತೆಕ್ಕಟ್ಟೆ ಸರಕಾರಿ ಪ.ಪೂ ಕಾಲೇಜು: ಹಳೆ ವಿದ್ಯಾರ್ಥಿಗಳಿಂದ ಶಾಲೆಗೆ ವಿವಿಧ ಪರಿಕರಗಳ ಹಸ್ತಾಂತರ

ತೆಕ್ಕಟ್ಟೆ: ಸರಕಾರಿ ಪದವಿ ಪೂರ್ವ ಕಾಲೇಜು ತೆಕ್ಕಟ್ಟೆ ಇಲ್ಲಿನ ಪ್ರೌಢಶಾಲಾ ವಿಭಾಗದಲ್ಲಿ 2009 ಮತ್ತು 10ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಪ್ರೌಢ ಶಾಲೆಗೆ ಪ್ರೊಜೆಕ್ಟರ್,ಟ್ರ್ಯಾಕ್ ಸೂಟ್,ಕಂಪ್ಯೂಟರ್ ಮೌಸ್ ಮತ್ತು ಕೀಪ್ಯಾಡ್ ಗಳ ವಿತರಣಾ ಸಮಾರಂಭ ನಡೆಯಿತು.

ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಿವರಾಮ ಶೆಟ್ಟಿ ವಿದ್ಯಾರ್ಥಿಗಳ ಕೊಡುಗೆಯನ್ನು ಶ್ಲಾಘಿಸಿದರು. ವಿಜಯ ಭಂಡಾರಿ ಪೂರ್ವ ವಿದ್ಯಾರ್ಥಿಗಳಿಂದ ನಿರಂತರವಾಗಿ ಶಾಲೆಗೆ ಸಹಾಯವಾಗಲಿ ಎಂದು ಹಾರೈಸಿದರು. ಕಾಲೇಜಿನ ಪ್ರಾಂಶುಪಾಲೆ ಶಾರದಾ ಹೊಳ್ಳ,ಸಂಸ್ಥೆಯ ಉಪ ಪ್ರಾಂಶುಪಾಲೆ ಸಂಧ್ಯಾರಾಣಿ ಕೆ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಅಣ್ಣಪ್ಪ ಆಚಾರ್ಯ ಮತ್ತು 2009 – 10 ನೇ ಸಾಲಿನ ವಿದ್ಯಾರ್ಥಿ ಪ್ರತಿನಿಧಿ ಚೇತನ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ 100000 ಮೌಲ್ಯದ ಟ್ರ್ಯಾಕ್ ಸೂಟ್, ಪ್ರೊಜೆಕ್ಟರ್, ಕಂಪ್ಯೂಟರ್ ಮೌಸ್ ಮತ್ತು ಕೀಬೋರ್ಡ್ ಗಳನ್ನು ಶಾಲೆಗೆ ಹಸ್ತಾಂತರಿಸಲಾಯಿತು. 2009 10ನೇ ಸಾಲಿನ ವಿದ್ಯಾರ್ಥಿಗಳಾದ ಹರೀಶ್ ಆಚಾರ್ಯ, ಸಂದೀಪ್ ಪೂಜಾರಿ, ಸಚಿನ್ ಆಚಾರ್ಯ, ಸಚಿನ್ ಪೂಜಾರಿ, ಗುರುರಾಜ,ಮುನೀರ್, ಸುದೀಪ್, ಅಭಿಲಾಷ್, ಸಂದೀಪ,ಕೌಶಿಕ್, ಚೈತ್ರ, ಪ್ರಮೀಳಾ,ಅಕ್ಷತಾ ರಶ್ಮಿತಾ,ಮಂಜುಳಾ. ಜಿ. ತೆಕ್ಕಟ್ಟೆ ಪ್ರಜ್ಞ ಗಾಣಿಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪ್ರಾಂಶುಪಾಲೆ ಸಂಧ್ಯಾರಾಣಿ ಕೆ ಸ್ವಾಗತಿಸಿದರು.

ಕನ್ನಡ ಶಿಕ್ಷಕರಾದ ರಾಜೀವ ಪೂಜಾರಿ ವಂದಿಸಿದರು ಹಿಂದಿ ಶಿಕ್ಷಕರಾದ ಅಶೋಕ ಸೋಮಯಾಜಿ ಕಾರ್ಯಕ್ರಮವನ್ನು ನಿರೂಪಿಸಿದರು.