ಉಡುಪಿಯ ಯುವತಿ ನಾಪತ್ತೆ

ಉಡುಪಿ: ಉಡುಪಿಯ ಕವಿತಾ ಕಂಪೌಂಡ್, ಕಾಡಬೆಟ್ಟು ನಿವಾಸಿ ಶ್ರುತಿ.ವೈ (18) ಎಂಬವರು ಸೋಮವಾರದಂದು ಬೆಳಿಗ್ಗೆ 8:30ರ ಸಮಯಕ್ಕೆ ಕಾಡಬೆಟ್ಟು ಮನೆಯಿಂದ ಕಾಣೆಯಾಗಿದ್ದಾರೆ. ಚಹರೆ: 5 ಅಡಿ ಎತ್ತರವಿದ್ದು, ಕಪ್ಪುಮೈಬಣ್ಣ, ಸಪೂರ ಮುಖ, ಗುಲಾಬಿ ಕೆಂಪು ಬಣ್ಣದ ಚೂಡಿದಾರ ಧರಿಸಿದ್ದು, ಕನ್ನಡ ತೆಲುಗು ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿ, ಉಡುಪಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.