ಉಡುಪಿ: ದಾರಿ ಮಧ್ಯೆ ಬಸ್ ನಲ್ಲಿ ಮೂರ್ಛೆತಪ್ಪಿ ಬಿದ್ದ ಪ್ರಯಾಣಿಕನೊಬ್ಬನನ್ನು ಬಸ್ ಚಾಲಕ ಹಾಗೂ ನಿರ್ವಾಹಕ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಪ್ರಾಣ ಉಳಿಸಿದ ಘಟನೆ ಇಂದು ದೊಡ್ಡಣಗುಡ್ಡೆ ಸಮೀಪ ನಡೆದಿದೆ.
ಉಡುಪಿಯಿಂದ ಪೆರಂಪಳ್ಳಿಗೆ ಹೋಗುತ್ತಿದ್ದ ದೇವಿಪ್ರಸಾದ್ ಖಾಸಗಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಮಾರ್ಗ ಮಧ್ಯೆ ಪ್ರಜ್ಞೆ ತಪ್ಪಿದ್ದು, ಇದನ್ನು ಗಮಿಸಿದ ಚಾಲಕ ಸತೀಶ್ ಹಾಗೂ ನಿರ್ವಾಹಕ ಅಭಿಷೇಕ್ ಬಸ್ ಅನ್ನು ಎಲ್ಲೂ ನಿಲ್ಲಿಸದೆ ಅದೇ ದಾರಿಯಲ್ಲಿ ಬರುವ ದೊಡ್ಡಣಗುಡ್ಡೆಯ ಬಾಳಿಗಾ ಆಸ್ಪತ್ರೆಗೆ ಸೇರಿದ್ದಾರೆ. ಚಾಲಕ ಹಾಗೂ ನಿರ್ವಾಹಕನ ಸಮಯಪ್ರಜ್ಞೆಯಿಂದ ಪ್ರಯಾಣಿಕನೊಬ್ಬನ ಜೀವ ಉಳಿದಿದೆ. ಇವರು ತೋರಿದ ಸಾಹಸಕ್ಕೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಇತರ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.