ಗೋಮಾಳ ಭೂಮಿ ಅನ್ಯ ಉದ್ದೇಶಗಳಿಗೆ ಬಳಸುವ ಚಿಂತನೆ ಖಂಡನೀಯ: ವಾಸುದೇವ ಭಟ್ ಪೆರಂಪಳ್ಳಿ 

ಗೋಮಾಳ ಭೂಮಿಗಳನ್ನು ಅನ್ಯ ಉದ್ದೇಶಗಳಿಗೆ ಬಳಸುವ ಕುರಿತಂತೆ ರಾಜ್ಯ ಸರ್ಕಾರವು ಚಿಂತನೆ ನಡೆಸಿರುವುದು ಖಂಡನೀಯವಾದುದು ಎಂದು ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಹೇಳಿದ್ದಾರೆ.

ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಒಂದು ಕಡೆ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ತಂದು, ಇನ್ನೊಂದು ಕಡೆ ಗೋವಿನ ನೆಲೆಗಳನ್ನು ನುಂಗುವ ಪ್ರವೃತ್ತಿಗೆ ಕೈಹಾಕಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಹೆಕ್ಟೇರ್ ಗಟ್ಟಲೆ ಗೋಮಾಳ ಭೂಮಿ ಅನ್ಯ ಉದ್ದೇಶಗಳಿಗೆ ಬಳಕೆ ಆಗಿದೆ‌. ಈಗ ಉಳಿದಿರುವ ಅಲ್ಪಸ್ವಲ್ಪ ಗೋಮಾಳವನ್ನು ಸರ್ಕಾರ ರಕ್ಷಣೆ ಮಾಡಬೇಕಿದೆ.‌‌ ಅದನ್ನು ಬಿಟ್ಟು ಅನ್ಯ ಉದ್ದೇಶಗಳಿಗೆ ಬಳಸಲು ಹೊರಟಿರುವುದು ಮೂರ್ಖ ನಿರ್ಧಾರ ಎಂದು ಟೀಕಿಸಿದ್ದಾರೆ.