ಮಲ್ಪೆ: ಬ್ರಾಹ್ಮಣರಿಲ್ಲದೆ ಯಾವ ಕಾರ್ಯಕ್ರಮವೂ ಪ್ರಾರಂಭವಾಗುವುದಿಲ್ಲ. ಬ್ರಾಹ್ಮಣನಿಲ್ಲದ ಯಾವುದೇ ಕಾರ್ಯಕ್ರಮಕ್ಕೆ ಶೋಭೆ ಇರುವುದಿಲ್ಲ. ಬಹುಶಃ ಸಾಮೂಹಿಕ ಬ್ರಹ್ಮೋಪದೇಶವನ್ಮು ಪ್ರಥಮವಾಗಿ ಆರಂಭಿಸಿದ ಹೆಗ್ಗಳಿಕೆ ಕೊಡವೂರು ಬ್ರಾಹ್ಮಣ ಮಹಾಸಭಾಕ್ಕೆ ಸಲ್ಲುತ್ತದೆ ಎಂದು ಪಲಿಮಾರು ಮಠದ ಕಿರಿಯ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಹೇಳಿದರು.
ಕೊಡವೂರು ಬ್ರಾಹ್ಮಣ ಮಹಾಸಭಾದ ರಜತ ಸಂಭ್ರಮದ ಅಂಗವಾಗಿ ಒಂದು ವರ್ಷ ಕಾಲ ಹಮ್ಮಿಕೊಂಡಿರುವ ‘ರಜತ ಪಥದಲ್ಲಿ ವಿಪ್ರ ನಡಿಗೆ’ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಕಳೆದ 24 ವರ್ಷಗಳಿಂದ ಕೊಡವೂರು ಬ್ರಾಹ್ಮಣ ಮಹಾಸಭಾ ಲೋಕ ಕಲ್ಯಾಣಾರ್ಥವಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸದಾ ಸಮಾಜ ಬಾಂಧವರ ಸೇವೆ ಮಾಡುತ್ತಾ 25ನೆ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಸಂತೋಷದ ವಿಚಾರ ಎಂದರು.
ಇದೇ ಸಂದರ್ಭದಲ್ಲಿ ಖ್ಯಾತ ಭಾಷಾ ವಿಜ್ಞಾನಿ ಹಾಗೂ ಕನ್ನಡ ಗಣಕ ಕೀಲಿಮಣೆ ಕರ್ತೃ ಕೆ. ಪಿ. ರಾವ್ ಅವರಿಗೆ “ವಿಪ್ರ ಜ್ಞಾನಿ” ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ಕೊಡವೂರು ಬ್ರಾಹ್ಮಣ ಮಹಾಸಭಾ ಆರಂಭಿಸಲು ಮಾರ್ಗದರ್ಶನ ನೀಡಿದ ಹರಿದಾಸ ಉಪಾಧ್ಯಾಯ, ಜಯರಾಮ ರಾವ್ ಹಾಗೂ ಕೊಡವೂರು ಬ್ರಾಹ್ಮಣ ಮಹಾಸಭಾದ ಸ್ಥಾಪಕ ಕಾರ್ಯದರ್ಶಿಗಳಾದ ಗೋವಿಂದ ಐತಾಳ್ ಅವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಾಧಿಕಾರಿ ಡಾ. ಭೀಮೇಶ್ವರ ಜೋಶಿ, ಕರ್ನಾಟಕ ಬ್ಯಾಂಕಿನ ಡಿ.ಜಿ.ಎಂ ಬಿ. ಗೋಪಾಲಕೃಷ್ಣ ಸಾಮಗ, ಉಡುಪಿ ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ, ವೇದಮೂರ್ತಿ ರಾಧಾಕೃಷ್ಣ ಉಪಾಧ್ಯಾಯ ಕಂಬಳಕಟ್ಟ ಭಾಗವಹಿಸಿದ್ದರು.
ವೇದಿಕೆಯಲ್ಲಿ ಗೌರವಾಧ್ಯಕ್ಷ ಗುರುರಾಜ ರಾವ್ ಮತ್ತು ಕಾರ್ಯದರ್ಶಿ ಶ್ರೀನಿವಾಸ ಬಾಯರಿ ಉಪಸ್ಥಿತರಿದ್ದರು.
ಕೊಡವೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಾರಾಯಣ ಬಲ್ಲಾಳ್ ಸ್ವಾಗತಿಸಿದರು. ರಜತೋತ್ಸವದ ಕಾರ್ಯಾಧ್ಯಕ್ಷ ಮಂಜುನಾಥ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ. ಎಂ ಎಲ್ ಸಾಮಗ ಅಭಿನಂದನಾ ಭಾಷಣ ಮಾಡಿದರು. ಕಿರಣ್ ರಾವ್ ಪ್ರಾರ್ಥಿಸಿದರು. ರಾಜೇಶ್ರೀ ಪ್ರಸನ್ನ ಪ್ರಶಸ್ತಿ ಪತ್ರ ವಾಚಿಸಿದರು. ಸಂಚಾಲಕ ಸುಧಿರ್ ರಾವ್ ಮುಂದಿನ ಕಾರ್ಯಕ್ರಮಗಳನ್ನು ತಿಳಿಸಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ರಾವ್ ವಂದಿಸಿದರು.