ಇದೇ 27ಕ್ಕೆ ವೇಳಾಪಟ್ಟಿ ಪ್ರಕಟವಾಗಲಿದ್ದು, ವಿಶ್ವಕಪ್​ಗೆ ಇನ್ನು ಮೂರೇ ತಿಂಗಳು.

ಐಸಿಸಿ ಇದೇ 27 ರಂದು ಮುಂಬೈನಲ್ಲಿ ಹೋಟೆಲ್​ವೊಂದರಲ್ಲಿ ಮಾಧ್ಯಮಗೋಷ್ಟಿ ಕರೆದಿದ್ದು, ಅಂದೇ ವಿಶ್ವಕಪ್​ ವೇಳಾಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಹೆಚ್ಚಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ವೇಳೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ -BCCI) ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ-ICC)ಗೆ ಕರಡು ವೇಳಾ ಪಟ್ಟಿಯನ್ನು ಸಲ್ಲಿಸಿತ್ತು. ಐಸಿಸಿ ಸ್ಪರ್ಧಿಸುವ ರಾಷ್ಟ್ರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸುವಂತೆ ತಿಳಿಸಿ ಆಯಾ ಕ್ರಿಕೆಟ್​ ಮಂಡಳಿಗೆ ಕಳುಹಿಸಿಕೊಟ್ಟಿದೆ ಎಂದು ವರದಿಗಳಾಗಿವೆ.

ವಿಶ್ವಕಪ್ ಸನಿಹವಾಗುತ್ತಿದ್ದು, ಇದೇ 27 ರಂದು ಐಸಿಸಿ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ ಮುಂದಿನ ವಾರ ಮುಂಬೈನಲ್ಲಿ ಏಕದಿನ ವಿಶ್ವಕಪ್​ನ ಪ್ರಮುಖ ಘೋಷಣೆಯ ಬಗ್ಗೆ ಕಾರ್ಯಕ್ರಮವನ್ನು ಆಯೋಜಿಸಿದೆ.

2023ರ ಏಕದಿನ ವಿಶ್ವಕಪ್‌ನ ವೇಳಾಪಟ್ಟಿಯನ್ನು ಇದೇ ಕಾರ್ಯಕ್ರಮದಲ್ಲಿ ಐಸಿಸಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಮಂಗಳವಾರ ಬೆಳಗ್ಗೆ 11:30 ರಿಂದ ಮುಂಬೈನ ಸೇಂಟ್ ರೆಜಿಸ್ ಹೋಟೆಲ್‌ನ ಆಸ್ಟರ್ ಬಾಲ್‌ರೂಮ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ವಾರ್ಷಿಕ ಕ್ಯಾಲೆಂಡರ್​ ಪ್ರಕಾರ ಭಾರತದಲ್ಲಿ ಈ ವರ್ಷದ ಕೊನೆಯ ತಿಂಗಳುಗಳಾದ ಅಕ್ಟೋಬರ್​ ಮತ್ತು ನವೆಂಬರ್​ನಲ್ಲಿ ಐಸಿಸಿ ಏಕದಿನ ವಿಶ್ವಕಪ್​ ನಡೆಯಲಿದೆ.