ಐಸಿಸಿ ಇದೇ 27 ರಂದು ಮುಂಬೈನಲ್ಲಿ ಹೋಟೆಲ್ವೊಂದರಲ್ಲಿ ಮಾಧ್ಯಮಗೋಷ್ಟಿ ಕರೆದಿದ್ದು, ಅಂದೇ ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಹೆಚ್ಚಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ವೇಳೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ -BCCI) ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ-ICC)ಗೆ ಕರಡು ವೇಳಾ ಪಟ್ಟಿಯನ್ನು ಸಲ್ಲಿಸಿತ್ತು. ಐಸಿಸಿ ಸ್ಪರ್ಧಿಸುವ ರಾಷ್ಟ್ರಗಳಿಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸುವಂತೆ ತಿಳಿಸಿ ಆಯಾ ಕ್ರಿಕೆಟ್ ಮಂಡಳಿಗೆ ಕಳುಹಿಸಿಕೊಟ್ಟಿದೆ ಎಂದು ವರದಿಗಳಾಗಿವೆ.
ವಿಶ್ವಕಪ್ ಸನಿಹವಾಗುತ್ತಿದ್ದು, ಇದೇ 27 ರಂದು ಐಸಿಸಿ ವೇಳಾಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮುಂದಿನ ವಾರ ಮುಂಬೈನಲ್ಲಿ ಏಕದಿನ ವಿಶ್ವಕಪ್ನ ಪ್ರಮುಖ ಘೋಷಣೆಯ ಬಗ್ಗೆ ಕಾರ್ಯಕ್ರಮವನ್ನು ಆಯೋಜಿಸಿದೆ.
2023ರ ಏಕದಿನ ವಿಶ್ವಕಪ್ನ ವೇಳಾಪಟ್ಟಿಯನ್ನು ಇದೇ ಕಾರ್ಯಕ್ರಮದಲ್ಲಿ ಐಸಿಸಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಮಂಗಳವಾರ ಬೆಳಗ್ಗೆ 11:30 ರಿಂದ ಮುಂಬೈನ ಸೇಂಟ್ ರೆಜಿಸ್ ಹೋಟೆಲ್ನ ಆಸ್ಟರ್ ಬಾಲ್ರೂಮ್ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ವಾರ್ಷಿಕ ಕ್ಯಾಲೆಂಡರ್ ಪ್ರಕಾರ ಭಾರತದಲ್ಲಿ ಈ ವರ್ಷದ ಕೊನೆಯ ತಿಂಗಳುಗಳಾದ ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಐಸಿಸಿ ಏಕದಿನ ವಿಶ್ವಕಪ್ ನಡೆಯಲಿದೆ.